ADVERTISEMENT

IPL 2022: ಐಪಿಎಲ್‌ಗೆ ಕರಿನೆರಳು; ಡೆಲ್ಲಿ ತಂಡದ ಫಿಸಿಯೊಗೆ ಕೋವಿಡ್ ದೃಢ

ಪಿಟಿಐ
Published 15 ಏಪ್ರಿಲ್ 2022, 12:29 IST
Last Updated 15 ಏಪ್ರಿಲ್ 2022, 12:29 IST
ಪ್ಯಾಟ್ರಿಕ್‌ ಫರ್ಹಾರ್ಟ್‌‌
ಪ್ಯಾಟ್ರಿಕ್‌ ಫರ್ಹಾರ್ಟ್‌‌   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಮತ್ತೆ ಕೋವಿಡ್ ಕರಿನೆರಳು ಆವರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೊ ಪ್ಯಾಟ್ರಿಕ್‌ ಫರ್ಹಾರ್ಟ್‌‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸದ್ಯಕ್ಕೆ ಪ್ಯಾಟ್ರಿಕ್ ಅವರ ಮೇಲೆ ಡೆಲ್ಲಿ ಫ್ರಾಂಚೈಸ್‌ನ ವೈದ್ಯಕೀಯ ತಂಡ ಸೂಕ್ಷ್ಮ ನಿಗಾ ಇರಿಸಿದೆ.

ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದರ ಭೀತಿ ಐಪಿಎಲ್ ಮೇಲೂ ಆವರಿಸಿದೆ.

ಕಳೆದ ವರ್ಷ ಕೋವಿಡ್ ಎರಡನೇ ಅಲೆಯಿಂದಾಗಿ ಮೇ ತಿಂಗಳಲ್ಲಿ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಬಳಿಕ ಟೂರ್ನಿಯನ್ನು ಕೆಲವು ತಿಂಗಳುಗಳ ನಂತರಯುಎಇಯಲ್ಲಿ ಸಂಪೂರ್ಣಗೊಳಿಸಲಾಗಿತ್ತು.

ಈ ಬಾರಿ ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನು ಮುಂಬೈ ಹಾಗೂ ಪುಣೆ ಸೇರಿದಂತೆ ಒಟ್ಟು ನಾಲ್ಕು ಸ್ಟೇಡಿಯಂಗಳಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು. ಅಲ್ಲದೆ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಪಂದ್ಯ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.