ADVERTISEMENT

IPL 2022 GT vs LSG: ಲಖನೌ ವಿರುದ್ಧ ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 13:45 IST
Last Updated 28 ಮಾರ್ಚ್ 2022, 13:45 IST
ಹಾರ್ದಿಕ್ ಪಾಂಡ್ ಹಾಗೂ ಕೆ.ಎಲ್. ರಾಹುಲ್
ಹಾರ್ದಿಕ್ ಪಾಂಡ್ ಹಾಗೂ ಕೆ.ಎಲ್. ರಾಹುಲ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಇದೇ ಮೊದಲ ಬಾರಿಗೆ ಲಖನೌ ಸೂಪರ್ ಜೈಂಟ್ಸ್‌ ಮತ್ತು ಗುಜರಾತ್ ಟೈಟನ್ಸ್ ಐಪಿಎಲ್‌ಗೆ ಎಂಟ್ರಿ ಕೊಟ್ಟಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಲಖನೌಗೆ ಮತ್ತು ಬರೋಡಾದ ಹಾರ್ದಿಕ್ ಗುಜರಾತ್‌ಗೆ ನಾಯಕತ್ವ ವಹಿಸುತ್ತಿದ್ದಾರೆ.

ADVERTISEMENT

ಕ್ರಿಕೆಟ್‌ ವಲಯದಲ್ಲಿ ಆಪ್ತಮಿತ್ರರೆಂದೇ ಗುರುತಿಸಿಕೊಳ್ಳುವ ರಾಹುಲ್ ಮತ್ತು ಹಾರ್ದಿಕ್ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯುತ್ತಿರುವುದು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.