ಮುಂಬೈ: ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್, ತಮ್ಮ 100ನೇ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಐಪಿಎಲ್ 2022ರಲ್ಲಿ ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ ಶತಕ ಗಳಿಸಿದ ರಾಹುಲ್, ತಮ್ಮ 100ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು.
ಇದನ್ನೂ ಓದಿ:IPL 2022 MI vs LSG: ರಾಹುಲ್ ಅಮೋಘ ಶತಕ; ಲಖನೌ 199/4
ಈ ಮೂಲಕ ಐಪಿಎಲ್ನಲ್ಲಿ ಮೂರನೇ ಶತಕ ಸಾಧನೆ ಮಾಡಿದರು. ಇದು ನಾಯಕರಾಗಿ ರಾಹುಲ್ ಬ್ಯಾಟ್ನಿಂದ ಸಿಡಿದ ಎರಡನೇ ಶತಕವಾಗಿದೆ.
ಆರಂಭಿಕನಾಗಿ ಕಣಕ್ಕಿಳಿದು ಇನ್ನಿಂಗ್ಸ್ ಅಂತ್ಯದ ವರೆಗೆ ನಾಟೌಟ್ ಆಗಿ ಉಳಿದ ರಾಹುಲ್, 60 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 103 ರನ್ ಗಳಿಸಿದರು. ಈ ಮೂಲಕ ಲಖನೌ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.