ADVERTISEMENT

IPL 2022: ಮಗದೊಂದು ಸ್ಮರಣೀಯ ದಾಖಲೆ ಬರೆದ ರೋಹಿತ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2022, 13:18 IST
Last Updated 3 ಏಪ್ರಿಲ್ 2022, 13:18 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಮುಂಬೈ: ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ರೋಹಿತ್ ಶರ್ಮಾ, ಮಗದೊಂದು ಮೈಲಿಗಲ್ಲು ಸ್ಥಾಪಿಸಿದ್ದು, 150 ಕ್ಯಾಚ್‌ ಹಿಡಿದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಈ ಸ್ಮರಣೀಯ ಮೈಲಿಗಲ್ಲುತಲುಪಿದರು.

ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಫೀಲ್ಡರ್ ಹಾಗೂ ಒಟ್ಟಾರೆಯಾಗಿ ಭಾರತದ ನಾಲ್ಕನೇ ಆಟಗಾರ ಎನಿಸಿದರು.

ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಪರ ವಿಕೆಟ್ ಕೀಪರ್‌ಗಳಾದ ಮಹೇಂದ್ರ ಸಿಂಗ್ ಧೋನಿ (200) ಹಾಗೂ ದಿನೇಶ್ ಕಾರ್ತಿಕ್ (192) ಅತಿ ಹೆಚ್ಚು ಕ್ಯಾಚ್‌ ಹಿಡಿದಿದ್ದಾರೆ.

ಇನ್ನು ಫೀಲ್ಡರ್‌ಗಳ ಪೈಕಿ ಸುರೇಶ್ ರೈನಾ (172) ನಂತರದ ಸ್ಥಾನವನ್ನು ರೋಹಿತ್ ಅಲಂಕರಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಭಾರತೀಯ ಆಟಗಾರರ ಪಟ್ಟಿ:
ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್): 200
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್): 192
ಸುರೇಶ್ ರೈನಾ: 172
ರೋಹಿತ್ ಶರ್ಮಾ: 150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.