ADVERTISEMENT

ಐಪಿಎಲ್‌ನಿಂದ ಹಿಂದೆ ಸರಿದ ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌

ಪಿಟಿಐ
Published 4 ಏಪ್ರಿಲ್ 2023, 7:12 IST
Last Updated 4 ಏಪ್ರಿಲ್ 2023, 7:12 IST
ಶಕೀಬ್ ಅಲ್ ಹಸನ್‌– ಎಎಫ್‌ಪಿ ಚಿತ್ರ
ಶಕೀಬ್ ಅಲ್ ಹಸನ್‌– ಎಎಫ್‌ಪಿ ಚಿತ್ರ   

ಮುಂಬೈ: ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ಅವರು ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಇಡೀ ಟೂರ್ನಿಗೆ ಅಲಭ್ಯರಾಗುವ ವಿಷಯವನ್ನು ಅವರು ತಮ್ಮ ಫ್ರಾಂಚೈಸ್‌ ಕೋಲ್ಕತ್ತ ನೈಟ್‌ ರೈಡರ್ಸ್‌ಗೆ ತಿಳಿಸಿದ್ದಾರೆ ಎಂದು ‘ಕ್ರಿಕ್‌ಇನ್ಫೊ’ ವೆಬ್‌ಸೈಟ್‌ ವರದಿ ಮಾಡಿದೆ.

ಅಂತರರಾಷ್ಟ್ರೀಯ ಪಂದ್ಯಗಳು ಇರುವುದರಿಂದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಕೆಕೆಆರ್‌ ತಂಡ ₹ 50 ಲಕ್ಷ ಮೂಲ ಬೆಲೆ ನೀಡಿ ಶಕೀಬ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ADVERTISEMENT

ಶಕೀಬ್‌ ಅವರು ಐರ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ (ಏ.4 ರಿಂದ 8) ಆಡಲಿದ್ದಾರೆ. ಏ.9 ರಂದು ಕೆಕೆಆರ್‌ ತಂಡವನ್ನು ಸೇರಿಕೊಳ್ಳುವರು ಎಂದು ನಿರೀಕ್ಷಿಸಲಾಗಿತ್ತು.

ಬಾಂಗ್ಲಾದೇಶದ ಇನ್ನೊಬ್ಬ ಆಟಗಾರ ಲಿಟನ್‌ ದಾಸ್‌ ಅವರು ಟೂರ್ನಿಯಲ್ಲಿ ಆಡಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.