ADVERTISEMENT

IPL-2020 | MI vs DC: ಕಿಶನ್ ಅಬ್ಬರ; ಮುಂಬೈಗೆ ಸುಲಭ ಜಯ

ಪಿಟಿಐ
Published 31 ಅಕ್ಟೋಬರ್ 2020, 18:12 IST
Last Updated 31 ಅಕ್ಟೋಬರ್ 2020, 18:12 IST
 ಇಶಾನ್‌ ಕಿಶನ್ ಬ್ಯಾಟಿಂಗ್‌ ವೈಖರಿ (ಐಪಿಎಲ್‌–ಟ್ವಿಟರ್‌ ಚಿತ್ರ)
ಇಶಾನ್‌ ಕಿಶನ್ ಬ್ಯಾಟಿಂಗ್‌ ವೈಖರಿ (ಐಪಿಎಲ್‌–ಟ್ವಿಟರ್‌ ಚಿತ್ರ)   

ದುಬೈ: ಮುಂಬೈ ಇಂಡಿಯನ್ಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮತ್ತು ‘ಡೆತ್‌ ಓವರ್’ ಪರಿಣಿತ ಜಸ್‌ಪ್ರೀತ್ ಬೂಮ್ರಾ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಜಯದ ಕನಸು ಕಮರಿತು. ತಲಾ ಮೂರು ವಿಕೆಟ್ ಕಬಳಿಸಿದ ಇಬ್ಬರೂ ಬೌಲರ್‌ಗಳು ಹಾಲಿ ಚಾಂಪಿಯನ್ ಮುಂಬೈ ತಂಡವು ಒಂಬತ್ತು ವಿಕೆಟ್‌ಗಳಿಂದ ಜಯಿಸಲು ಕಾರಣರಾದರು.

ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 110 ರನ್‌ ಗಳಿಸಿತು. ಇಶಾನ್ ಕಿಶನ್ (ಔಟಾಗದೆ 72; 47ಎಸೆತ) ಅರ್ಧಶತಕದ ಬಲ ದಿಂದ ಮುಂಬೈ ತಂಡವು 14.2 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 111 ರನ್‌ ಗಳಿಸಿತು. ಇದರೊಂದಿಗೆ 13ರಲ್ಲಿ ಒಂಬತ್ತು ಪಂದ್ಯಗಳನ್ನು ಜಯಿಸಿ 18 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಪಾಡಿಕೊಂಡಿತು. ಮುಂಬೈ ಈಗಾಗಲೇ ಪ್ಲೇ ಆಫ್‌ ಪ್ರವಶಿಸಿದೆ.

ಡೆಲ್ಲಿ ತಂಡವು ಏಳು ಪಂದ್ಯಗಳಲ್ಲಿ ಗೆದ್ದಿದೆ. ಆರರಲ್ಲಿ ಸೋತಿದೆ. ಸದ್ಯ ಮೂರನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ತಲಾ ಒಂದೊಂದು ಪಂದ್ಯ ಉಳಿದಿವೆ.

ADVERTISEMENT

ಡೆಲ್ಲಿ ತಂಡದ ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ಶಿಖರ್ ಧವನ್ ವೈಫಲ್ಯ ಅನುಭವಿಸಿದರು. ಬೌಲ್ಟ್‌ ಎಸೆತಗಳಲ್ಲಿ ಇಬ್ಬರೂ ದಂಡ ತೆತ್ತರು.

ಶ್ರೇಯಸ್ ಅಯ್ಯರ್ (25 ರನ್) ಮತ್ತು ರಿಷಭ್ ಪಂತ್ (21 ರನ್) ಸ್ಷಲ್ಪ ಹೋರಾಟ ಮಾಡಿದರು. ಅದರೆ ರಾಹುಲ್ ಚಾಹರ್ ಸ್ಪಿನ್ ದಾಳಿಯಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಚೆಲ್ಲಿದರು. ಬೂಮ್ರಾ ಎಸೆತದಲ್ಲಿ ರಿಷಭ್ ಪಂತ್ ಎಲ್‌ಬಿಡಬ್ಲ್ಯು ಆದರು. ಹೆಟ್ಮೆಯರ್ (11), ಆರ್. ಅಶ್ವಿನ್ (12) ಮತ್ತು ಕಗಿಸೊ ರಬಾಡ (12) ಅವರಷ್ಟೇ ಎರಡಂಕಿ ದಾಟಿದರು.

ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಕ್ಯಾಪಿಟಲ್ಸ್:
20 ಓವರ್‌ಗಳಲ್ಲಿ 9ಕ್ಕೆ 110 (ಪೃಥ್ವಿ ಶಾ 10, ಶ್ರೇಯಸ್‌ ಅಯ್ಯರ್‌ 25, ರಿಷಭ್‌ ಪಂತ್‌ 21, ಶಿಮ್ರಾನ್‌ ಹೆಟ್ಮೆಯರ್‌ 11, ಆರ್‌.ಅಶ್ವಿನ್‌ 12, ಕಗಿಸೊ ರಬಾಡ 12; ಟ್ರೆಂಟ್‌ ಬೌಲ್ಟ್‌ 21ಕ್ಕೆ3, ಜಸ್‌ಪ್ರೀತ್‌ ಬೂಮ್ರಾ 17ಕ್ಕೆ3, ನೇಥನ್‌ ಕೌಲ್ಟರ್‌ನೈಲ್‌ 14ಕ್ಕೆ1, ರಾಹುಲ್ ಚಾಹರ್‌ 24ಕ್ಕೆ1)
ಮುಂಬೈ ಇಂಡಿಯನ್ಸ್: 14.2 ಓವರ್‌ಗಳಲ್ಲಿ 1ಕ್ಕೆ 111 (ಇಶಾನ್‌ ಕಿಶನ್‌ ಔಟಾಗದೆ 72, ಕ್ವಿಂಟನ್ ಡಿಕಾಕ್‌ 26, ಸೂರ್ಯಕುಮಾರ್‌ ಯಾದವ್‌ ಔಟಾಗದೆ 12; ಎನ್ರಿಕ್‌ ನಾಕಿಯಾ 25ಕ್ಕೆ1).
ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ 9 ವಿಕೆಟ್‌ಗಳ ಜಯ; ಪಂದ್ಯಶ್ರೇಷ್ಠ: ಇಶಾನ್ ಕಿಶನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.