ADVERTISEMENT

ಐಪಿಎಲ್‌ಗೆ 240 ಪುಟಗಳ ಕೋವಿಡ್ ತಡೆ ಮಾರ್ಗಸೂಚಿ

ಐಪಿಎಲ್ ಆಡಳಿತ ಸಮಿತಿ ಸಭೆ ಇಂದು

ಪಿಟಿಐ
Published 1 ಆಗಸ್ಟ್ 2020, 16:38 IST
Last Updated 1 ಆಗಸ್ಟ್ 2020, 16:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಆಡಳಿತ ಸಮಿತಿಯ ಸಭೆಯು ಭಾನುವಾರ ನಡೆಯಲಿದೆ.

ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆಸಲು ಉದ್ದೇಶಿಸಿರುವ ಐಪಿಎಲ್ ಟೂರ್ನಿಯಲ್ಲಿ ಕೊರೊನಾ ಸೋಂಕು ತಡೆಗೆ ಪಾಲಿಸಬೇಕಾದ ಮಾರ್ಗಸೂಚಿಯ 240 ಪುಟಗಳ ಕೈಪಿಡಿಯನ್ನು ಈ ಸಭೆಯಲ್ಲಿ ಫ್ರ್ಯಾಂಚೈಸ್‌ಗಳಿಗೆ ವಿತರಿಸಲಾಗುತ್ತಿದೆ. ಅಲ್ಲದೇ ಚೀನಾ ದೇಶದ ಕಂಪೆನಿಗಳ ಪ್ರಾಯೋಜಕತ್ವ ಕೈಬಿಡುವ ಬಗ್ಗೆ ಚರ್ಚೆ ನಡೆಯಲಿದೆ.

ಚರ್ಚೆಯ ವಿಷಯಗಳು

ADVERTISEMENT

1) ಹೋದ ಬಾರಿಯ ಸಭೆಯ ನಿರ್ಣಯಗಳಿಗೆ ಅಂಗೀಕಾರ ಪಡೆಯುವುದು.

2) ಐಪಿಎಲ್‌ ಟೂರ್ನಿಯನ್ನು ಯುಎಇಯಲ್ಲಿ ನಡೆಸಲು ಕೇಂದ್ರ ಸರ್ಕಾರದ ಅನುಮತಿಗಾಗಿ ಮನವಿ

3) ಐಪಿಎಲ್ ಟೂರ್ನಿಯ ವೇಳಾಪಟ್ಟಿ ಕುರಿತು ತೀರ್ಮಾನ. 51 ಅಥವಾ 53 ದಿನಗಳ ಟೂರ್ನಿಯ ಅವಧಿ ಬಗ್ಗೆ ಚರ್ಚೆ

4) ಚೀನಾದ ವಿವೊ, ಪಾಲುದಾರ ಸಂಸ್ಥೆಗಳಾದ ಪೇಟಿಎಂ, ಡ್ರೀಮ್ ಇಲೆವನ್, ಬೈಜುಸ್, ಸ್ವಿಗ್ಗಿ ಪ್ರಾಯೋಜಕತ್ವ ಕೈಬಿಡುವ ಅಥವಾ ಮುಂದುವರಿಸುವ ಕುರಿತು.

5) ಐಪಿಎಲ್‌ನಲ್ಲಿ ಪಾಲಿಸಬೇಕಾದ ಕೋವಿಡ್ ನಿಯಂತ್ರಣ ಮಾರ್ಗಸೂಚಿಯ 240 ಪುಟಗಳ ಕೈಪಿಡಿಯನ್ನು ಫ್ರ್ಯಾಂಚೈಸ್‌ಗಳಿಗೆ ಹಸ್ತಾಂತರ.

6) ಆಡಳಿತ ಸಮಿತಿ ಸದಸ್ಯರಿಗೆ ಪ್ರಯಾಣದ ಅವಕಾಶ ಮೊಟಕು ಸಾಧ್ಯತೆ

7) ದಕ್ಷಿಣ ಆಫ್ರಿಕಾದಲ್ಲಿ ಗಡಿ ನಿರ್ಬಂಧ ಹಾಕಲಾಗಿದೆ. ವಿಮಾನಯಾನ ಇಲ್ಲದ ಕಾರಣ, ಎಬಿ ಡಿವಿಲಿಯರ್ಸ್,ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡ, ಇಮ್ರಾನ್ ತಾಹೀರ್ ಐಪಿಎಲ್‌ಗೆ ಬರುವುದು ಅನುಮಾನ. ಅವರಿಗೆ ಬದಲೀ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ತಂಡಗಳಿಗೆ ಅವಕಾಶ ಕೊಡುವ ಬಗ್ಗೆ

8) ಭ್ರಷ್ಟಾಚಾರ ತಡೆಗೆ ಐಸಿಸಿಯ ಎಸಿಯುನಿಂದ ಸಿಬ್ಬಂದಿಯನ್ನು ನಿಯೋಜಿಸಲು ಬಿಸಿಸಿಐ ಮನವಿ ಸಲ್ಲಿಸುವ ಸಾಧ್ಯತೆ. ಅದಕ್ಕಾಗಿ ಶುಲ್ಕ ಭರಿಸುವ ಕುರಿತು ಚರ್ಚೆ. ಬಿಸಿಸಿಐನಲ್ಲಿ ಎಸಿಯುನಲ್ಲಿ ಎಂಟು ಪೂರ್ಣಾವಧಿ ಅಧಿಕಾರಿಗಳಿದ್ದಾರೆ.

9) ಬಿಸಿಸಿಯನ ವೈದ್ಯಕೀಯ ತಂಡದ ನಿಯೋಜನೆ

10) ಜೀವ ಸುರಕ್ಷಾ ನಿಯಮಗಳ ಜಾರಿ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಪರಿಣತರೊಂದಿಗೆ ಚರ್ಚೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.