ಸೌತಾಂಪ್ಟನ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೋವಿಡ್–19 ಸೋಂಕು ಕಂಡುಬಂದಿರುವುದು ಕಳವಳಕಾರಿ ಎಂದು ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಜಲ್‌ವುಡ್ ಹೇಳಿದ್ದಾರೆ. ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಪರ ಆಡುವ ಅವರು, ಸದ್ಯ ಆಸ್ಟ್ರೇಲಿಯ ತಂಡದ ಇಂಗ್ಲೆಂಡ್ ಪ್ರವಾಸದತ್ತ ಗಮನಹರಿಸಿರುವುದಾಗಿ ತಿಳಿಸಿದ್ದಾರೆ.
ಯುಎಇಯಲ್ಲಿ ಸೆಪ್ಟೆಂಬರ್ 19ರಂದು ಐಪಿಎಲ್ ಟೂರ್ನಿಯು ಆರಂಭವಾಗಲಿದೆ. ಅಲ್ಲಿಗೆ ತೆರಳಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಇಬ್ಬರು ಆಟಗಾರರು ಸೇರಿ 13 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರನ್ನು ಪ್ರತ್ಯೇಕ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
‘ಸಿಎಸ್‌ಕೆ ತಂಡದ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಈ ಸುದ್ದಿ ತಿಳಿಯಿತು. ಇದು ಕಳವಳಕಾರಿ ಸಂಗತಿ‘ ಎಂದು ಹ್ಯಾಜಲ್‌ವುಡ್ ನುಡಿದರು.
‘ಸೋಕಿತರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಈ ಕ್ವಾರಂಟೈನ್ ಅವಧಿ ಕೆಲವೇ ದಿನಗಳಲ್ಲಿ ಅಂತ್ಯಗೊಳ್ಳಲಿದೆ. ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುವ ಸೀಮಿತ ಓವರ್‌ಗಳ ಪಂದ್ಯಗಳ ಸರಣಿಯತ್ತ ನಾನು ಚಿತ್ತ ನೆಟ್ಟಿದ್ದೇನೆ. ಐಪಿಎಲ್ ಟೂರ್ನಿಯ ದಿನ ಹತ್ತಿರ ಬಂದಾಗ ಅದರ ಬಗ್ಗೆ ಆಲೋಚಿಸುತ್ತೇನೆ‘ ಎಂದು ಹ್ಯಾಜಲ್‌ವುಡ್ ಹೇಳಿದರು.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಸೆಪ್ಟೆಂಬರ್ 4ರಿಂದ 16ರವರೆಗೆ ತಲಾ ಮೂರು ಟ್ವೆಂಟಿ–20 ಹಾಗೂ ಏಕದಿನ ಪಂದ್ಯಗಳ ಸರಣಿಗಳು ನಡೆಯಲಿವೆ. ಹ್ಯಾಜಲ್‌ವುಡ್ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.