ADVERTISEMENT

ಮುಂಬೈ ಇಂಡಿಯನ್ಸ್‌ನಲ್ಲಿ ಅಲ್ಜಾರಿ ಬದಲಿಗೆ ಹೆನ್ರಿಕ್ಸ್‌

ರಾಯಿಟರ್ಸ್
Published 23 ಏಪ್ರಿಲ್ 2019, 12:53 IST
Last Updated 23 ಏಪ್ರಿಲ್ 2019, 12:53 IST
ಬ್ಯೂರನ್ ಹೆನ್ರಿಕ್ಸ್
ಬ್ಯೂರನ್ ಹೆನ್ರಿಕ್ಸ್   

ಮುಂಬೈ: ಗಾಯಗೊಂಡಿರುವ ವೆಸ್ಟ್ ಇಂಡೀಸ್ ಆಟಗಾರ ಅಲ್ಜಾರಿ ಜೋಸೆಫ್ ಬದಲಿಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಬ್ಯೂರನ್ ಹೆನ್ರಿಕ್ಸ್ ಅವರನ್ನು ಮುಂಬೈ ಇಂಡಿಯನ್ಸ್ ಕರೆಸಿಕೊಂಡಿದೆ. ನ್ಯೂಜಿಲೆಂಡ್‌ ವೇಗಿ ಆ್ಯಡಂ ಮಿಲ್ನೆ ಬದಲಿಗೆ ಅಲ್ಜಾರಿ ಅವರನ್ನು ಇತ್ತೀಚೆಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಚೊಚ್ಚಲ ಐಪಿಎಲ್‌ನಲ್ಲಿ ಅಲ್ಜಾರಿ ಅಮೋಘ ಸಾಧನೆ ಮಾಡಿದ್ದರು. ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ 12ಕ್ಕೆ6 ವಿಕೆಟ್ ಕಬಳಿಸಿ ಐಪಿಎಲ್ ಇತಿಹಾಸದಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಖ್ಯಾತಿ ಗಳಿಸಿದ್ದರು. ಆದರೆ ನಂತರದ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದರು. ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅವರ ಬಲಗೈಗೆ ಗಾಯವಾಗಿತ್ತು.

ಹೆನ್ರಿಕ್ಸ್ 2014 ಮತ್ತು 2015ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಐಪಿಎಲ್ ಟೂರ್ನಿಯಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾ ಪರ 10 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು 16 ವಿಕೆಟ್ ಉರುಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.