ನಾಗ್ಪುರ: ಎಡಗೈ ಸ್ಪಿನ್ನರ್ ಪಾರ್ಥ್ ರೇಖಡೆ (24ಕ್ಕೆ2) ಅವರ ಉತ್ತಮ ಬೌಲಿಂಗ್ ಬಲದಿಂದ ವಿದರ್ಭ ತಂಡವು ಇರಾನಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ತಂಡವು ಅಥರ್ವ್ ತೈಡೆ (ಅಜೇಯ 118) ಅವರ ಶತಕದ ಬಲದಿಂದ 101. 4 ಓವರ್‌ಗಳಲ್ಲಿ 342 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಪಂದ್ಯದ ಎರಡನೇ ದಿನವಾದ ಗುರುವಾರ ರೆಸ್ಟ್ ಆಫ್ ಇಂಡಿಯಾ ತಂಡವು 53 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 142 ರನ್ ಗಳಿಸಿತು. ತಂಡದ ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್ (52; 112ಎ, 4X6) ಅರ್ಧಶತಕ ಗಳಿಸಿದರು. ನಾಯಕ ರಜತ್ ಪಾಟೀದಾರ್ (ಬ್ಯಾಟಿಂಗ್ 42) ಹಾಗೂ ಮಾನವ್ ಸುತಾರ್ (ಔಟಾಗದೇ 1) ಕ್ರೀಸ್‌ನಲ್ಲಿದ್ದಾರೆ. ಮೊದಲ ಇನಿಂಗ್ಸ್ ಬಾಕಿ ಚುಕ್ತಾ ಮಾಡಲು ರಜತ್ ಪಡೆಗೆ ಇನ್ನೂ 200 ರನ್‌ಗಳ ಅಗತ್ಯವಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 101.4 ಓವರ್‌ಗಳಲ್ಲಿ 342 (ಅಥರ್ವ ತೈಡೆ ಔಟಾಗದೇ 118, ಯಶ್ ರಾಥೋಡ್ 91, ಆಕಾಶದೀಪ್ 51ಕ್ಕೆ3, ಮಾನವ್ ಸುತಾರ 74ಕ್ಕೆ3, ಸಾರಾಂಶ್ ಜೈನ್ 94ಕ್ಕೆ2) ರೆಸ್ಟ್ ಆಫ್ ಇಂಡಿಯಾ: 53 ಓವರ್‌ಗಳಲ್ಲಿ 5ಕ್ಕೆ142 (ಅಭಿಮನ್ಯು ಈಶ್ವರನ್ 52, ರಜತ್ ಪಾಟೀದಾರ್ ಔಟಾಗದೇ 42, ಪಾರ್ಥ್ ರೇಖಡೆ 24ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.