ADVERTISEMENT

ಟೆಸ್ಟ್‌ ಕ್ರಿಕೆಟ್‌: ತೈಜುಲ್‌ ದಾಳಿಗೆ ಕುಸಿದ ಐರ್ಲೆಂಡ್‌

ಏಜೆನ್ಸೀಸ್
Published 4 ಏಪ್ರಿಲ್ 2023, 14:25 IST
Last Updated 4 ಏಪ್ರಿಲ್ 2023, 14:25 IST
ವಿಕೆಟ್‌ ಪಡೆದ ಸಂಭ್ರಮದಲ್ಲಿ ತೈಜುಲ್‌ ಇಸ್ಲಾಂ –ಎಎಫ್‌ಪಿ
ವಿಕೆಟ್‌ ಪಡೆದ ಸಂಭ್ರಮದಲ್ಲಿ ತೈಜುಲ್‌ ಇಸ್ಲಾಂ –ಎಎಫ್‌ಪಿ   

ಢಾಕಾ: ಎಡಗೈ ಸ್ಪಿನ್ನರ್‌ ತೈಜುಲ್‌ ಇಸ್ಲಾಂ (58ಕ್ಕೆ 5) ಅವರ ಚುರುಕಿನ ದಾಳಿಗೆ ಕುಸಿತ ಕಂಡ ಐರ್ಲೆಂಡ್‌ ತಂಡ, ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದೆ.

ಮೀರ್‌ಪುರದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಮಂಗಳವಾರದ ಆಟದಲ್ಲಿ ಐರ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 214 ರನ್‌ಗಳಿಗೆ ಆಲೌಟಾಯಿತು.

ಆರಂಭಿಕ ಆಘಾತ ಅನುಭವಿಸಿರುವ ಆತಿಥೇಯ ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 34 ರನ್‌ ಗಳಿಸಿದೆ. ಇನಿಂಗ್ಸ್‌ ಹಿನ್ನಡೆ ತಪ್ಪಿಸಲು ಇನ್ನೂ 180 ರನ್‌ ಗಳಿಸಬೇಕಿದೆ.

ADVERTISEMENT

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ ತಂಡ ತೈಜುಲ್‌ ಅವರ ಕೈಚಳಕದ ಮುಂದೆ ಪರದಾಟ ನಡೆಸಿತು. ಹ್ಯಾರಿ ಟೆಕ್ಟರ್‌ (50) ಅರ್ಧಶತಕ ಗಳಿಸಿದರು. ಇತರ ಬ್ಯಾಟರ್‌ಗಳು ವಿಫಲರಾದರು.

ತೈಜುಲ್‌ಗೆ ತಕ್ಕ ಸಾಥ್‌ ನೀಡಿದ ಮೆಹಿದಿ ಹಸನ್‌ ಮಿರಾಜ್ ಮತ್ತು ಎಬಾದತ್‌ ಹೊಸೇನ್‌ ತಲಾ ಎರಡು ವಿಕೆಟ್‌ ಪಡೆದರು.

ಐರ್ಲೆಂಡ್‌ ತಂಡ 2017 ರಲ್ಲಿ ಐಸಿಸಿಯ ಕಾಯಂ ಸದಸ್ಯತ್ವ ಪಡೆದ ಬಳಿಕ ಆಡಿದ ಎಲ್ಲ ಮೂರೂ ಟೆಸ್ಟ್‌ಗಳಲ್ಲಿ ಸೋತಿದೆ.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌ ಮೊದಲ ಇನಿಂಗ್ಸ್‌ 77.2 ಓವರ್‌ಗಳಲ್ಲಿ 214 (ಹ್ಯಾರಿ ಟೆಕ್ಟರ್‌ 50, ಕರ್ಟಿಸ್‌ ಕ್ಯಾಂಫರ್‌ 34, ಲೋರ್ಕನ್‌ ಟಕರ್‌ 37, ಮಾರ್ಕ್‌ ಅಡೇರ್‌ 32, ತೈಜುಲ್‌ ಇಸ್ಲಾಂ 58ಕ್ಕೆ 5, ಮೆಹಿದಿ ಹಸನ್‌ ಮಿರಾಜ್ 43ಕ್ಕೆ 2, ಎಬಾದತ್‌ ಹೊಸೇನ್‌ 54ಕ್ಕೆ 2)

ಬಾಂಗ್ಲಾದೇಶ ಮೊದಲ ಇನಿಂಗ್ಸ್‌ 10 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 34 (ತಮೀಮ್‌ ಇಕ್ಬಾಲ್‌ 21, ಮೋಮಿನುಲ್ ಹಕ್‌ ಬ್ಯಾಟಿಂಗ್‌ 12)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.