ADVERTISEMENT

ಕ್ರಿಕೆಟ್‌: ಜೈನ್‌ ಕಾಲೇಜಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 19:33 IST
Last Updated 20 ಅಕ್ಟೋಬರ್ 2018, 19:33 IST
ವಿಜಯ ಕಪ್‌ ಅಂತರ ಕಾಲೇಜು ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಜೈನ್‌ ಕಾಲೇಜು ತಂಡದವರು. (ನಿಂತವರು, ಎಡದಿಂದ) ‍ಪ್ರಣವ್‌, ಅರ್ಜುನ್‌, ಹರ್ಷಿತ್‌, ವಿಘ್ನೇಶ್‌, ನಕುಲ್‌, ಆದಿತ್ಯ, ಶ್ಯಾಮ್‌ ಮತ್ತು ರಾಹುಲ್‌. (ಕುಳಿತವರು) ಮಿಥೇಶ್‌, ಚೆನ್ನರಾಜ್‌ ರಾಯ್‌ಚಂದ್‌ (ಅಧ್ಯಕ್ಷರು, ಜೈನ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಷನ್ಸ್‌), ಯು.ವಿ.ಶಂಕರ್‌ (ಕ್ರೀಡಾ ನಿರ್ದೇಶಕರು), ರೋಹನ್‌ (ನಾಯಕ) ಮತ್ತು ನಿಶಿತ್‌.

ಬೆಂಗಳೂರು: ವಿಘ್ನೇಶ್‌ (73 ರನ್‌) ಮತ್ತು ನಕುಲ್‌ (50 ರನ್‌) ಅವರ ಅರ್ಧಶತಕಗಳ ಬಲದಿಂದ ಎಸ್‌ಬಿಎಂ ಜೈನ್‌ ಕಾಲೇಜು ತಂಡದವರು ವಿಜಯ ಕಪ್‌ ಅಂತರ ಕಾಲೇಜು ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಫೈನಲ್‌ ಹೋರಾಟದಲ್ಲಿ ಜೈನ್‌ ಕಾಲೇಜು 97ರನ್‌ಗಳಿಂದ ಸುರಾನ ಕಾಲೇಜು ತಂಡವನ್ನು ಮಣಿಸಿದೆ.

ಮೊದಲು ಬ್ಯಾಟ್‌ ಮಾಡಿದ ಜೈನ್‌ ಕಾಲೇಜು ತಂಡ 20 ಓವರ್‌ಗಳಲ್ಲಿ 200 ರನ್‌ ದಾಖಲಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಸುರಾನ ತಂಡ 7 ವಿಕೆಟ್‌ಗೆ 103ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.