ADVERTISEMENT

ಬೂಮ್ರಾಗೆ ‘ಉಮ್ರಿಗರ್‌’ ಗೌರವ

ಪಿಟಿಐ
Published 12 ಜನವರಿ 2020, 20:15 IST
Last Updated 12 ಜನವರಿ 2020, 20:15 IST
ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಜಸ್‌ಪ್ರೀತ್‌ ಬೂಮ್ರಾ –ಪಿಟಿಐ ಚಿತ್ರ
ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಜಸ್‌ಪ್ರೀತ್‌ ಬೂಮ್ರಾ –ಪಿಟಿಐ ಚಿತ್ರ   

ಮುಂಬೈ : ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ವರ್ಷದ ಶ್ರೇಷ್ಠ ಆಟಗಾರನಿಗೆ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್‌ ಗೌರವಕ್ಕೆ ಭಾಜನರಾಗಿದ್ದಾರೆ. ಜೊತೆಗೆ ದಿಲೀಪ್‌ ಸರ್ದೇಸಾಯಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಉಮ್ರಿಗರ್‌ ಪ್ರಶಸ್ತಿಯು ₹15 ಲಕ್ಷದ ಚೆಕ್‌, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಟೆಸ್ಟ್‌ ಮಾದರಿಯಲ್ಲಿ ಅತೀ ಹೆಚ್ಚು ವಿಕೆಟ್‌ ಮತ್ತು ಅತೀ ಹೆಚ್ಚು ರನ್‌ ಬಾರಿಸಿದವರಿಗೆ ಸರ್ದೇಸಾಯಿ ಪುರಸ್ಕಾರ ನೀಡಲಾಗುತ್ತದೆ. ಬೂಮ್ರಾ ಅವರು 2018–19ನೇ ಋತುವಿನಲ್ಲಿ ಆರು ಪಂದ್ಯಗಳಿಂದ 34 ವಿಕೆಟ್‌ ಉರುಳಿಸಿದ್ದರು. ಚೇತೇಶ್ವರ ಪೂಜಾರ ಅವರೂ ಈ ಗೌರವಕ್ಕೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ₹ 2 ಲಕ್ಷದ ಚೆಕ್‌ ಮತ್ತು ಟ್ರೋಫಿಯನ್ನು ಒಳಗೊಂಡಿದೆ.

ADVERTISEMENT

ಕರ್ನಾಟಕದ ಮಯಂಕ್‌ ಅಗರವಾಲ್‌ ಅವರು ‘ಬೆಸ್ಟ್‌ ಇಂಟರ್‌ನ್ಯಾಷನಲ್‌ ಡೆಬ್ಯೂ’ ಪ್ರಶಸ್ತಿ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ಶಫಾಲಿ ವರ್ಮಾಗೆ ಈ ಗೌರವ ಒಲಿದಿದೆ.

ಪೂನಮ್‌ ಯಾದವ್‌ ಅವರು ‘ವರ್ಷದ ಶ್ರೇಷ್ಠ ಅಂತರರಾಷ್ಟ್ರೀಯ ಆಟಗಾರ್ತಿ’ ಹಿರಿಮೆಗೆ ಭಾಜನರಾಗಿದ್ದಾರೆ.

ಸ್ಮೃತಿ ಮಂದಾನ ಮತ್ತು ಜೂಲನ್‌ ಗೋಸ್ವಾಮಿ ಅವರು ಕ್ರಮವಾಗಿ ಏಕದಿನ ಮಾದರಿಯಲ್ಲಿ ಅತೀ ಹೆಚ್ಚು ರನ್‌ ಮತ್ತು ವಿಕೆಟ್‌ ಪಡೆದ ಆಟಗಾರ್ತಿ (2018–19ನೇ ಸಾಲಿನ) ಗೌರವ ಗಳಿಸಿದ್ದಾರೆ.

ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಅಂಜುಮ್‌ ಚೋಪ್ರಾ ಅವರು ಸಿ.ಕೆ.ನಾಯ್ಡು ಜೀವಮಾನ ಸಾಧನೆ ಮತ್ತು ಬಿಸಿಸಿಐ ಜೀವಮಾನ ಸಾಧನೆ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯು ₹ 25 ಲಕ್ಷದ ಚೆಕ್‌, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.