ADVERTISEMENT

WPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜೆಮಿಮಾ ನಾಯಕಿ

ಪಿಟಿಐ
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
ಜೆಮಿಮಾ ರಾಡ್ರಿಗಸ್‌
ಜೆಮಿಮಾ ರಾಡ್ರಿಗಸ್‌   

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ತಾರಾ ಬ್ಯಾಟರ್‌ ಜೆಮಿಮಾ ರಾಡ್ರಿಗಸ್‌ ಅವರು ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕಿಯಾಗಿ ನೇಮಕಗೊಂಡಿದ್ದಾರೆ.

ಜೆಮಿಮಾ ಅವರು 2026ರ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ್ರ್ಯಾಂಚೈಸಿಯು ಮಂಗಳವಾರ ಘೋಷಿಸಿದೆ.

‘ಡೆಲ್ಲಿ ತಂಡದ ನಾಯಕಿಯಾಗಿ ನೇಮಕವಾಗಿರುವುದು ಗೌರವದ ವಿಷಯ. ನನ್ನ ಮೇಲೆ ವಿಶ್ವಾಸವಿಟ್ಟು, ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಿದ ಫ್ರ್ಯಾಂಚೈಸಿಯ ಮಾಲೀಕರು ಹಾಗೂ ಕೋಚ್‌ ಸಿಬ್ಬಂದಿಗೆ ಆಭಾರಿಯಾಗಿರುವೆ’ ಎಂದು 25 ವರ್ಷ ವಯಸ್ಸಿನ ಜೆಮಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಜೆಮಿಮಾ ಅವರು ನವೆಂಬರ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ ಶತಕ ಬಾರಿಸಿ, ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 

ಡಬ್ಲ್ಯುಪಿಎಲ್‌ ಆರಂಭವಾದಾಗಿನಿಂದಲೂ ತಂಡದ ನಾಯಕಿಯಾಗಿದ್ದ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಮೆಗ್‌ ಲ್ಯಾನಿಂಗ್‌ ಅವರನ್ನು ನವೆಂಬರ್‌ನಲ್ಲಿ ನಡೆದ ಬಿಡ್‌ಗೆ ಮೊದಲು ತಂಡದಿಂದ ಬಿಡುಗಡೆ ಮಾಡಲಾಗಿತ್ತು.

ಜೆಮಿಮಾ ರಾಡ್ರಿಗಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.