ADVERTISEMENT

ಜನಾಂಗೀಯ ನಿಂದನೆ: ಜೋಫ್ರಾ ದೂರು

ಪಿಟಿಐ
Published 25 ನವೆಂಬರ್ 2019, 19:01 IST
Last Updated 25 ನವೆಂಬರ್ 2019, 19:01 IST

ವೆಲಿಂಗ್ಟನ್‌: ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯದ ಅಂತಿಮ ದಿನ ಆಟ ಮುಗಿಸಿ ಹಿಂತಿರುಗುತ್ತಿದ್ದಾಗ ಪ್ರೇಕ್ಷಕನೊಬ್ಬ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ ಸೋಮವಾರ ಹೇಳಿದ್ದಾರೆ. ಇದಕ್ಕೆ ಸ್ಪಂದಿಸಿದ ನ್ಯೂಜಿಲೆಂಡ್‌, ಪ್ರೇಕ್ಷಕನ ಸಮ್ಮತಾರ್ಹವಲ್ಲದ ವರ್ತನೆಗೆ ಜೋಫ್ರಾ ಅವರ ಕ್ಷಮೆ ಕೇಳಿದೆ.‌

‘ಅಂಗಣದಿಂದ ನಿರ್ಗಮಿಸುವಾಗ ಕಿರಿಕಿರಿಯಾಗುವ ರೀತಿ ಪ್ರೇಕ್ಷಕನೊಬ್ಬನಿಂದ ಜನಾಂಗೀಯ ನಿಂದನೆಯ ಮಾತು ಕೇಳಿಬಂತು. ಪಂದ್ಯದ ಐದೂ ದಿನ ಪ್ರೇಕ್ಷಕರು ವರ್ತನೆ ಮತ್ತು ಬಾರ್ಮಿ ಆರ್ಮಿ (ಇಂಗ್ಲೆಂಡ್‌ ಬೆಂಬಲಿಸುವ ಪಡೆ) ಚೆನ್ನಾಗಿ ವರ್ತಿಸಿತ್ತು’ ಎಂಟು ಟ್ವಿಟರ್‌ನಲ್ಲಿ 24 ವರ್ಷದ ವೇಗದ ಬೌಲರ್‌ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಬಾರ್ಬಡೋಸ್ ಸಂಜಾತರಾದ ಜೋಫ್ರಾ 50 ಎಸೆತಗಳಲ್ಲಿ 30 ರನ್‌ ಗಳಿಸಿ ಕೆಲಕಾಲ ಇಂಗ್ಲೆಂಡ್‌ ಆಸರೆಗೆ ನಿಂತಿದ್ದರು.‌

ADVERTISEMENT

ಕ್ಷಮೆ ಕೋರಿರುವ ನ್ಯೂಜಿಲೆಂಡ್‌ ಕ್ರಿಕೆಟ್‌ (ಎನ್‌ಝಡ್‌ಸಿ), ಸಿಸಿಟಿವಿ ಫೂಟೇಜ್‌ಗಳ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.