ADVERTISEMENT

ಜೋಸ್ ಬಟ್ಲರ್ ವೈಟ್ ಬಾಲ್ ಕ್ರಿಕೆಟ್‌ನ ಬೆಸ್ಟ್ ಓಪನರ್: ಸಂಗಕ್ಕರ

ಪಿಟಿಐ
Published 7 ಏಪ್ರಿಲ್ 2024, 2:29 IST
Last Updated 7 ಏಪ್ರಿಲ್ 2024, 2:29 IST
ಕುಮಾರ ಸಂಗಕ್ಕರ
ಕುಮಾರ ಸಂಗಕ್ಕರ   

ಜೈಪುರ: ಸದ್ಯ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ 316 ರನ್ ಸಿಡಿಸಿ ಈವರೆಗೆ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಆದರೆ, ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ ಸಂಗಕ್ಕರ, ಜೋಸ್ ಬಟ್ಲರ್ ಅವರು ವಿಶ್ವದ ಅತ್ಯುತ್ತಮ ವೈಟ್ ಬಾಲ್ ಕ್ರಿಕೆಟರ್ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಜೋಸ್ ಬಟ್ಲರ್ 58 ಎಸೆತಗಳಲ್ಲಿ ಸಿಡಿಸಿದ ಅಜೇಯ 100 ರನ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ನಿರಾಯಾಸವಾಗಿ ಸೋಲಿಸಿತು.

ಬಟ್ಲರ್ ಫಾರ್ಮ್‌ಗೆ ಮರಳಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಗಕ್ಕರ, ಜೋಸ್ ಅವರು ವಿಶ್ವದಲ್ಲೇ ವೈಟ್‌ ಬಾಲ್ ಕ್ರಿಕೆಟ್‌ನ ಅತ್ಯುತ್ತಮ ಓಪನರ್. ಅವರು ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಆಡುವುದನ್ನಷ್ಟೆ ಮಾಡಬೇಕು ಎಂದಿದ್ದಾರೆ.

ADVERTISEMENT

ತಮ್ಮ ಫಾರ್ಮ್ ಕಳೆದುಕೊಂಡ ಬಗ್ಗೆ ದುಗುಡ ಇದ್ದ ಬಗ್ಗೆ ಬಟ್ಲರ್ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಬಹಳ ದೀರ್ಘಕಾಲ ಕ್ರಿಕೆಟ್ ಆಡಿದ ಬಳಿಕವೂ ಫಾರ್ಮ್ ಬಗ್ಗೆ ಒತ್ತಡ ಮತ್ತು ದುಗುಡ ಇದ್ದೇ ಇರುತ್ತದೆ. ಕೆಲವೊಮ್ಮೆ ಅದರ ಬಗ್ಗೆ ಹೆಚ್ಚು ಆತಂಕಗೊಳ್ಳದೆ ರಿಲ್ಯಾಕ್ಸ್ ಆಗಿರುವುದು ಉತ್ತಮ’ಎಂದು ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿ(ಅಜೇಯ 113) ಅವರ ಶತಕದ ನೆರವಿನಿಂದ ಆರ್‌ಸಿಬಿ 183 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ತಂಡ ಆರಂಭದಲ್ಲಿ ಜೈಸ್ವಾಲ್ ವಿಕೆಟ್ ಕಳೆದುಕೊಂಡರೂ ಸಹ ನಂತರ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ದೀರ್ಘ ಜೊತೆಯಾಟದ ನೆರವಿನಿಂದ ಗೆಲುವಿನ ನಗೆ ಬೀರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.