ADVERTISEMENT

ಆಸ್ಟ್ರೇಲಿಯಾ ತಂಡಕ್ಕೆ ಆಘಾತ: ಆರಂಭಿಕ ಪಂದ್ಯಗಳಿಗೆ ಹ್ಯಾಜಲ್‌ವುಡ್ ಅಲಭ್ಯ

ಪಿಟಿಐ
Published 2 ಫೆಬ್ರುವರಿ 2026, 13:09 IST
Last Updated 2 ಫೆಬ್ರುವರಿ 2026, 13:09 IST
<div class="paragraphs"><p>ಜೋಶ್ ಹ್ಯಾಜಲ್‌ವುಡ್ </p></div>

ಜೋಶ್ ಹ್ಯಾಜಲ್‌ವುಡ್

   

ಸಿಡ್ನಿ: ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್‌ ಅವರು ಗಾಯದಿಂದ ಇನ್ನೂ ‘ಪುನಶ್ಚೇತನ’ದಲ್ಲಿರುವ ಕಾರಣ ವಿಶ್ವಕಪ್‌ನ ಆರಂಭದ ಪಂದ್ಯಗಳಿಗೆ ತಂಡದೊಂದಿಗೆ ಪಯಣಿಸುವುದಿಲ್ಲ ಎಂದು ರಾಷ್ಟ್ರೀಯ ಆಯ್ಕೆಗಾರ ಟೋನಿ ಡೋಡ್‌ಮೇಡ್‌ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಥಾನ್ ಎಲಿಸ್‌, ಟಿಮ್ ಡೇವಿಡ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್ ಅವರು ಈಗಾಗಲೇ ಕೊಲಂಬೊ ತಲುಪಿದ್ದಾರೆ. ವಿಶ್ವಕಪ್ ಆಡುವ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದಿಂದ ಮಂಗಳವಾರ ಕೊಲಂಬೊಕ್ಕೆ ಬಂದಿಳಿಯಲಿದೆ ಎಂದು ಡೋಡ್‌ಮೇಡ್ ತಿಳಿಸಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ತಂಡವು ತನ್ನ ನಾಲ್ಕು ಪಂದ್ಯಗಳನ್ನು ಕೊಲಂಬೊ ಮತ್ತು ಪೆಲ್ಲೆಕೆರೆಯಲ್ಲಿ ಆಡಲಿದೆ. ಮೊದಲ ಪಂದ್ಯ 11ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಹ್ಯಾಜಲ್‌ವುಡ್‌ ಅವರು ಸದ್ಯ ಸಿಡ್ನಿಯಲ್ಲೇ ಇರಲಿದ್ದು, ಟ್ರಾವೆಲಿಂಗ್ ರಿಜರ್ವ್ ಆಗಿರುವ ಸೀನ್ ಅಬಾಟ್ ಅವರು ತಂಡವನ್ನು ಸೇರಿಕೊಳ್ಳಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.