ADVERTISEMENT

ಅಂಧರ ಕ್ರಿಕೆಟ್‌: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ

ಪ್ರಕಾಶ್‌ ಜಯರಾಮಯ್ಯ ಸತತ ಎರಡನೇ ಶತಕ; ರಾಜಸ್ಥಾನ ತಂಡದ ವಿರುದ್ಧ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:37 IST
Last Updated 12 ಫೆಬ್ರುವರಿ 2021, 15:37 IST
ಪ್ರಕಾಶ್ ಜಯರಾಮಯ್ಯ
ಪ್ರಕಾಶ್ ಜಯರಾಮಯ್ಯ   

ಬೆಂಗಳೂರು: ಸ್ಫೋಟಕ ಶೈಲಿಯ ಬ್ಯಾಟ್ಸ್‌ಮನ್ ಪ್ರಕಾಶ್‌ ಜಯರಾಮಯ್ಯ ಸತತ ಎರಡನೇ ಶತಕ ಸಿಡಿಸಿ ಮಿಂಚಿದರು. ಅಜೇಯ 111 ರನ್ ಗಳಿಸಿದ ಅವರ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ನಾಗೇಶ್ ಟ್ರೋಫಿ ಅಂಧರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ತಾನ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳಿಂದ ಗೆದ್ದ ಆತಿಥೇಯರು ಲೀಗ್‌ ಹಂತದ ಐದೂ ಪಂದ್ಯಗಳಲ್ಲಿ ಜಯ ಗಳಿಸಿದ ಸಾಧನೆ ಮಾಡಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ತಾನ ತಂಡ ಘೇವಾರ್‌ ರೆಬಾರಿ ಅವರ 70 ರನ್‌ಗಳ ನೆರವಿನಿಂದ 154 ರನ್‌ ಗಳಿಸಿತು. ಕರ್ನಾಟಕ 10.2 ಓವರ್‌ಗಳಲ್ಲಿ ಗುರಿ ಮುಟ್ಟಿತು. ಗುರುವಾರ ಕೇರಳದ ವಿರುದ್ಧ ಶತಕ ಹೊಡೆದಿದ್ದ ಪ್ರಕಾಶ್‌ ಜಯರಾಮಯ್ಯ ಶುಕ್ರವಾರ 43 ಎಸೆತಗಳನ್ನು ಎದುರಿಸಿ 24 ಬೌಂಡರಿ ಬಾರಿಸಿದರು.

‘ಬಿ’ ಗುಂಪಿನಲ್ಲಿ ಕರ್ನಾಟಕ ಅಗ್ರಸ್ಥಾನ ಗಳಿಸಿತು. ಕೇರಳ ಕೂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಇತರ ಗುಂಪುಗಳಿಂದ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಗುಜರಾತ್‌, ಹರಿಯಾಣ ಮತ್ತು ಉತ್ತರಾಖಂಡ ತಂಡಗಳು ಎಂಟರ ಘಟ್ಟ ತಲುಪಿದವು. ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕಕ್ಕೆ ತಮಿಳುನಾಡು ಎದುರಾಳಿ. ನಾಕೌಟ್ ಹಂತದ ಪಂದ್ಯಗಳು ಭಾನುವಾರದಿಂದ ನಡೆಯಲಿವೆ.

ADVERTISEMENT

ಸಂಕ್ಷಿಪ್ತ ಸ್ಕೋರು
ರಾಜಸ್ತಾನ:
20 ಓವರ್‌ಗಳಲ್ಲಿ 8ಕ್ಕೆ154 (ಘೇವಾರ್‌ ರೇಬಾರಿ ಔಟಾಗದೆ 70; ಕೆ.ಎಸ್‌.ಪುನೀತ್‌ 10ಕ್ಕೆ2)
ಕರ್ನಾಟಕ: 10.2 ಓವರ್‌ಗಳಲ್ಲಿ 1 ವಿಕೆಟ್‌ಗೆ 157 (ಪ್ರಕಾಶ್‌ ಜಯರಾಮಯ್ಯ ಔಟಾಗದೇ 111).

ತಮಿಳುನಾಡು: 20 ಓವರ್‌ಗಳಲ್ಲಿ 7ಕ್ಕೆ176 (ಪಿ.ಅರುಣ್‌ ಕುಮಾರ್‌ 81)
ಉತ್ತರಾಖಂಡ: 20 ಓವರ್‌ಗಳಲ್ಲಿ 8ಕ್ಕೆ120 (ಪಿ.ಅರುಣ್‌ಕುಮಾರ್‌ 5ಕ್ಕೆ2)

ಆಂಧ್ರಪ್ರದೇಶ: 20 ಓವರ್‌ಗಳಲ್ಲಿ 6ಕ್ಕೆ254 (ಡಿ.ವೆಂಕಟೇಶ್ವರ ರಾವ್‌ 149, ಎ.ರವಿ 54)
ಮಧ್ಯಪ್ರದೇಶ: 19 ಓವರ್‌ಗಳಲ್ಲಿ 108 (ಅಜಯಕುಮಾರ್‌ ರೆಡ್ಡಿ 16ಕ್ಕೆ3).

ತೆಲಂಗಾಣ: 20 ಓವರ್‌ಗಳಲ್ಲಿ 7ಕ್ಕೆ 137 (ಫಾರುಲ್ಲಾ ಖಾನ್‌ 50)
ಗೋವಾ: 14.4 ಓವರ್‌ಗಳಲ್ಲಿ 3ಕ್ಕೆ140 (ಅಕ್ಷಯ ಬೋರಿಕರ್‌ 50).

ಮಹಾರಾಷ್ಟ್ರ: 20 ಓವರ್‌ಗಳಲ್ಲಿ 6ಕ್ಕೆ 151 (ದಿಲೀಪ್‌ ಶಿವಾಜಿ 69, ಎನ್‌.ಕೆ.ವಿಷ್ಣು 16ಕ್ಕೆ3)
ಕೇರಳ: 17.4 ಓವರ್‌ಗಳಲ್ಲಿ 3ಕ್ಕೆ152 (ಅಬ್ದುಲ್‌ ಮುನಾಜ್‌ 69).

ದೆಹಲಿ:20 ಓವರ್‌ಗಳಲ್ಲಿ 8ಕ್ಕೆ195 (ಮನೀಶ್‌ ಕುಮಾರ್‌ ಔಟಾಗದೇ 117, ಅರಿಂದಮ್‌ ಮೊಂಡಲ್‌ 29ಕ್ಕೆ3)
ಪಶ್ಚಿಮ ಬಂಗಾಳ: 19.1ಓವರ್‌ಗಳಲ್ಲಿ 1 ವಿಕೆಟ್‌ಗೆ 198 (ಅರಿಂದಮ್‌ ಮೊಂಡಲ್‌ ಔಟಾಗದೇ 95, ಸುರ್ಜೀತ್‌ ಘರಾ ಔಟಾಗದೇ 50)

ಮಣಿಪುರ: 11.2 ಓವರ್‌ಗಳಲ್ಲಿ 72 (ಬಾಲಾಜಿಬಾಯಿ ಸೋದಾ 9ಕ್ಕೆ4)
ಗುಜರಾತ್‌ 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 75 (ಬಾಲಾಜಿಬಾಯಿ ಸೋದಾ ಔಟಾಗದೇ 45).

ಜಮ್ಮು ಮತ್ತು ಕಾಶ್ಮೀರ:20 ಓವರ್‌ಗಳಲ್ಲಿ 6ಕ್ಕೆ 272 (ಮೊಹಮ್ಮದ್‌ ಅಜೀಮ್‌ 102)
ಹಿಮಾಚಲ ಪ್ರದೇಶ: 20 ಓವರ್‌ಗಳಲ್ಲಿ 216 (ವಿಜಯಕುಮಾರ್‌ ಔಟಾಗದೇ 126, ಕೌಶಲ್‌ ಔಟಾಗದೇ 53).

ಜಾರ್ಖಂಡ್‌:20 ಓವರ್‌ಗಳಲ್ಲಿ 5ಕ್ಕೆ 184 (ನಿಶಿತ್‌ ವಿಲಿಯಂ ಔಟಾಗದೇ 64);
ಉತ್ತರ ಪ್ರದೇಶ:20 ಓವರ್‌ಗಳಲ್ಲಿ 9ಕ್ಕೆ 143 (ಚಂದನ್‌ ಔಟಾಗದೇ 70, ರೋಹಿತ್‌ 22ಕ್ಕೆ2).

ಪುದುಚೇರಿ:20 ಓವರ್‌ಗಳಲ್ಲಿ 6ಕ್ಕೆ 152 (ಶಕ್ತಿಗಣಪತಿ 46);
ಬಿಹಾರ: 18 ಓವರ್‌ಗಳಲ್ಲಿ 7ಕ್ಕೆ153 (ಸರವಣನ್‌ 26ಕ್ಕೆ3).

ಒಡಿಶಾ: 20 ಓವರ್‌ಗಳಲ್ಲಿ 192 (ಸುಖ್‌ರಾಮ್‌ 68, ಲಾಲ್‌ ಪ್ರಸಾದ್‌ ಸೊರೇನ್‌ 51, ದೀಪಕ್‌ ಮಲಿಕ್‌ 38ಕ್ಕೆ4)
ಹರಿಯಾಣ:20 ಓವರ್‌ಗಳಲ್ಲಿ 9ಕ್ಕೆ145 (ನಕುಲ್‌ 32ಕ್ಕೆ4, ಸುಖ್‌ರಾಮ್‌ 12ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.