ADVERTISEMENT

ನಾಗೇಶ್‌ ಟ್ರೋಫಿ ರಾಷ್ಟ್ರೀಯ ಟಿ20: ಪ್ರಕಾಶ್‌ 99; ನಾಲ್ಕರ ಘಟ್ಟಕ್ಕೆ ಕರ್ನಾಟಕ

ನಾಗೇಶ್‌ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 13:42 IST
Last Updated 14 ಫೆಬ್ರುವರಿ 2021, 13:42 IST
ಪ್ರಕಾಶ್ ಜಯರಾಮಯ್ಯ
ಪ್ರಕಾಶ್ ಜಯರಾಮಯ್ಯ   

ಬೆಂಗಳೂರು: ಪ್ರಕಾಶ್ ಜಯರಾಮಯ್ಯ (ಔಟಾಗದೆ 99) ಅವರು ಮತ್ತೊಮ್ಮೆ ಸ್ಫೋಟಕ ಆಟವಾಡಿದರು. ಅವರ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು ಹತ್ತು ವಿಕೆಟ್‌ಗಳಿಂದ ಸೋಲಿಸಿ ನಾಗೇಶ್‌ ಟ್ರೋಫಿ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಬೆಂಗಳೂರಿನ ಹೊರವಲಯದಲ್ಲಿರುವ ಅಲ್ಟಾಯರ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು ನಿಗದಿತ ಓವರ್‌ಗಳಲ್ಲಿ 169 ರನ್‌ ಗಳಿಸಿತು. ತಂಡದ ಅರುಣ್‌ ಕುಮಾರ್‌ (ಔಟಾಗದೆ 65) ಮಿಂಚಿದರು. ಗುರಿ ಬೆನ್ನತ್ತಿದ ‌ಕರ್ನಾಟಕ ಇನ್ನೂ 6.2 ಓವರ್‌ಗಳಿರುವಂತೆಯೇ ಜಯದ ದಡ ತಲು‍ಪಿತು.

ಕರ್ನಾಟಕದ ಪರ ಹಿಂದಿನ ಎರಡು ಪಂದ್ಯಗಳಲ್ಲಿ ಶತಕದ ಆಟವಾಡಿದ್ದ ಪ್ರಕಾಶ್‌ ಇಂದೂ ತಮ್ಮ ಎಂದಿನ ಆಟವನ್ನು ಮುಂದುವರಿಸಿದರು. 48 ಎಸೆತಗಳನ್ನು ಎದುರಿಸಿದ ಅವರ ಬ್ಯಾಟಿಂಗ್‌ನಲ್ಲಿ 20 ಬೌಂಡರಿಗಳಿದ್ದವು. ಸಿ. ಉಮೇಶ್‌ (ಔಟಾಗದೆ 63, 36 ಎಸೆತ, 12 ಬೌಂಡರಿ) ಅವರಿಗೆ ಉತ್ತಮ ಸಹಕಾರ ನೀಡಿದರು.

ADVERTISEMENT

ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು ಒಡಿಶಾ ತಂಡವನ್ನು ಎದುರಿಸಲಿದೆ. ಎಂಟರಘಟ್ಟದ ಇನ್ನೊಂದು ಪಂದ್ಯದಲ್ಲಿ ಒಡಿಶಾ89 ರನ್‌ಗಳಿಂದ ಜಾರ್ಖಂಡ್‌ ತಂಡವನ್ನು ಸೋಲಿಸಿತು.

ಆಂಧ್ರಪ್ರದೇಶ ಮತ್ತು ಹರಿಯಾಣ ತಂಡಗಳೂ ನಾಲ್ಕರ ಘಟ್ಟ ತಲುಪಿದವು.

ಸಂಕ್ಷಿಪ್ತ ಸ್ಕೋರುಗಳು: ತಮಿಳುನಾಡು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 (ಪಿ. ಅರುಣ್‌ಕುಮಾರ್‌ ಔಟಾಗದೆ 85). ಕರ್ನಾಟಕ: 13.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 173 (ಪ್ರಕಾಶ್‌ ಜಯರಾಮಯ್ಯ ಔಟಾಗದೆ 99, ಸಿ. ಉಮೇಶ್‌ ಔಟಾಗದೆ 63). ಫಲಿತಾಂಶಳ ಕರ್ನಾಟಕ ತಂಡಕ್ಕೆ 10 ವಿಕೆಟ್‌ಗಳ ಗೆಲುವು.

ಗುಜರಾತ್‌: 19.4 ಓವರ್‌ಗಳಲ್ಲಿ 145 (ಜಿಗ್ನೇಶ್‌ 51; ಟಿ. ದುರ್ಗಾ ರಾವ್‌ 14ಕ್ಕೆ 3, ಪ್ರೇಮ್‌ಕುಮಾರ್‌ 24ಕ್ಕೆ 3). ಆಂಧ್ರ ಪ್ರದೇಶ: 20 ಓವರ್‌ಗಳಲ್ಲಿ 2ಕ್ಕೆ 146 (ಅಜಯಕುಮಾರ್‌ ರೆಡ್ಡಿ 66, ಡಿ. ತಾಂಡವಕೃಷ್ಣ ಔಟಾಗದೆ 45). ಫಲಿತಾಂಶ: ಆಂಧ್ರ ಪ್ರದೇಶ ತಂಡಕ್ಕೆ 8 ವಿಕೆಟ್‌ಗಳ ಗೆಲುವು.

ಒಡಿಶಾ: 20 ಓವರ್‌ಗಳಲ್ಲಿ 5ಕ್ಕೆ 211 (ನಕುಲ್‌ ಬದ್ನಾಯಕ್‌ 81). ಜಾರ್ಖಂಡ್‌: 20 ಓವರ್‌ಗಳಲ್ಲಿ 7ಕ್ಕೆ 122 (ಪಂಕಜ್‌ ಭುವಿ 14ಕ್ಕೆ3). ಫಲಿತಾಂಶ: ಒಡಿಶಾ ತಂಡಕ್ಕೆ 89 ರನ್‌ಗಳ ಗೆಲುವು.

ಕೇರಳ: 20 ಓವರ್‌ಗಳಲ್ಲಿ 7ಕ್ಕೆ 204 (ಎ. ಮನೀಶ್‌ 77) ಹರಿಯಾಣ: 15.1 ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಳ್ಳದೆ 205 (ದೀಪಕ್‌ ಮಲಿಕ್‌ ಔಟಾಗದೆ 115, ರೋಹಿತ್‌ ಶರ್ಮಾ ಔಟಾಗದೆ 53). ಫಲಿತಾಂಶ: ಹರಿಯಾಣ ತಂಡಕ್ಕೆ 10 ವಿಕೆಟ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.