ADVERTISEMENT

ಕ್ರಿಕೆಟ್‌: ರೈಲ್ವೇಸ್‌ಗೆ ಮಣಿದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:35 IST
Last Updated 24 ಫೆಬ್ರುವರಿ 2020, 19:35 IST

ಬೆಂಗಳೂರು: ಪ್ರೀತಿ ಆರ್‌.ಬೋಸ್‌ (12ಕ್ಕೆ3) ಮತ್ತು ಸ್ವಾಗತಿಕಾ ರತ್‌ (6ಕ್ಕೆ2) ಅವರ ದಾಳಿಗೆ ಕಂಗೆಟ್ಟ ಕರ್ನಾಟಕ ತಂಡ ಬಿಸಿಸಿಐ ಸೀನಿಯರ್‌ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ರೈಲ್ವೇಸ್‌ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಆರ್‌ಎಸ್‌ಪಿಬಿ) ಎದುರು 191ರನ್‌ಗಳ ಹೀನಾಯ ಸೋಲು ಕಂಡಿದೆ.

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಇಂದಿರಾ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌ಎಸ್‌ಪಿಬಿ ತಂಡ ಮಿಥಾಲಿ ರಾಜ್‌ (121; 123ಎ, 12ಬೌಂ, 1ಸಿ) ಮತ್ತು ಪೂನಮ್‌ ರಾವುತ್‌ (94) ಅವರ ಆಕರ್ಷಕ ಬ್ಯಾಟಿಂಗ್‌ ಬಲದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 266ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 39 ಓವರ್‌ಗಳಲ್ಲಿ 76ರನ್‌ಗಳಿಗೆ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌: ಆರ್‌ಎಸ್‌ಪಿಬಿ; 50 ಓವರ್‌ಗಳಲ್ಲಿ 5 ವಿಕೆಟ್‌ಗೆ 266 (ಪೂನಮ್‌ ರಾವುತ್‌ 94, ಮಿಥಾಲಿ ರಾಜ್‌ 121, ಎಸ್‌.ಆಶಾ ಔಟಾಗದೆ 21; ಆಕಾಂಕ್ಷಾ ಕೊಹ್ಲಿ 57ಕ್ಕೆ2, ಮೋನಿಕಾ ಸಿ.ಪಟೇಲ್‌ 52ಕ್ಕೆ3).

ADVERTISEMENT

ಕರ್ನಾಟಕ: 39 ಓವರ್‌ಗಳಲ್ಲಿ 76 (ಪ್ರೀತಿ ಆರ್‌.ಬೋಸ್‌ 12ಕ್ಕೆ3, ಸ್ವಾಗತಿಕಾ ರತ್‌ 6ಕ್ಕೆ2, ಏಕ್ತಾ ಬಿಷ್ಠ್‌ 17ಕ್ಕೆ2). ಫಲಿತಾಂಶ: ಆರ್‌ಎಸ್‌ಪಿಬಿ ತಂಡಕ್ಕೆ 191ರನ್‌ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.