
ಕ್ರಿಕೆಟ್
ಬೆಂಗಳೂರು: ಟಿ. ಸಚಿನ್ ಮತ್ತು ಮೊಹಮ್ಮದ್ ಹಮ್ಜಾ ಅವರ ಶತಕದ ಬಲದಿಂದ ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿಯು ಟೈಗರ್ ಕಪ್ 12 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮ್ಯಾಕ್ಸ್ ಮುಲ್ಲರ್ ತಂಡವನ್ನು 94 ರನ್‌ಗಳಿಂದ ಮಣಿಸಿತು.
ಟೂರ್ನಿಯ 13ನೇ ದಿನವಾದ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ಯಾಂಥರ್ಸ್ ತಂಡವು 30 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 287 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮ್ಯಾಕ್ಸ್ ಮುಲ್ಲರ್ ತಂಡವು 30 ಓವರ್‌ಗಳಲ್ಲಿ 8 ವಿಕೆಟ್‌ಗೆ 193 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿ: 30 ಓವರ್‌ಗಳಲ್ಲಿ 2 ವಿಕೆಟ್‌ಗೆ 287 ( ಟಿ.ಸಚಿನ್ 124, ಮೊಹಮ್ಮದ್ ಹಮ್ಜಾ 114). ಮ್ಯಾಕ್ಸ್ ಮುಲ್ಲರ್: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 193 (ಲಿಖಿತ್ ಸಿ.ಕೆ. 66; ವಿಷ್ಣು ಸಾತ್ವಿಕ್ 41ಕ್ಕೆ 3). ಫಲಿತಾಂಶ: ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿಗೆ 94 ರನ್‌ಗಳ ಜಯ.
ಸಿಬಿಟಿ ಮಕುಶ್ಲಾ: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 164 (ಶ್ರೇಯಸ್ ಗುಪ್ತಾ 44, ದೈವಿಕ್ ಶರ್ಮಾ 31ಕ್ಕೆ4, ಸೈಯದ್ ಅಬ್ಬಾಸ್ 35ಕ್ಕೆ 2). ಕೆಸಿಸಿ ಗುರುಕುಲ್: 28.1 ಓವರ್‌ಗಳಲ್ಲಿ 6 ವಿಕೆಟ್‌ಗೆ 165 (ಅಭಿನಯ್ ಕಾರ್ತಿಕ್ 42, ಅದ್ವಿಕ್ ಗುಪ್ತಾ 33ಕ್ಕೆ 3, ಚಿರಂತನ ಎಸ್. 33ಕ್ಕೆ 2). ಕೆಸಿಸಿ ಗುರುಕುಲ್ ತಂಡಕ್ಕೆ 4 ವಿಕೆಟ್‌ಗಳ ಜಯ.
ಗೋಪಾಲನ್: 30 ಓವರ್‌ಗಳಲ್ಲಿ 3 ವಿಕೆಟ್‌ಗೆ 208 (ಇಶಾನ್ ಸುಭಾಷ್ 57,ಹುಸೇನ್ ಸೈಯದ್ 36). ಪಿಇಎಸ್‌ಐಟಿ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 170 (ಅಕ್ಷಂ ಅಮಿತ್ 34, ಖುಷಾಹಲ್ ಸರ್ವಿ 25ಕ್ಕೆ 2). ಫಲಿತಾಂಶ: ಗೋಪಾಲನ್ ತಂಡಕ್ಕೆ 38 ರನ್‌ಗಳ ಜಯ.
ಸೌತ್ ಕ್ರಿಕೆಟರ್ಸ್: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 160 (ಕೌಸ್ತುಭ ಕಲ್ಲೂರಾಯ 24; ಕಹಾನ್ ಹಲಾನಿ 13ಕ್ಕೆ 3, ಪಲಾಶ್ ಜಿಂದಾಲ್ 23ಕ್ಕೆ 2). ಸ್ಕೂಲ್ ಆಫ್ ಕ್ರಿಕೆಟ್: 25.2 ಓವರ್‌ಗಳಲ್ಲಿ 2 ವಿಕೆಟ್‌ಗೆ 161 (ಕಹಾನ್ ಹಲಾನಿ 85). ಫಲಿತಾಂಶ: ಸೌತ್ ಕ್ರಿಕೆಟರ್ಸ್‌ಗೆ 8 ವಿಕೆಟ್‌ಗಳ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.