ADVERTISEMENT

ಭಾರತ ವಿರುದ್ಧ ಟ್ವೆಂಟಿ-20 ಸರಣಿ: ವೆಸ್ಟ್‌ ಇಂಡೀಸ್‌ಗೆ ಕೀರನ್ ಪೊಲಾರ್ಡ್‌ ನಾಯಕ

ಐಎಎನ್ಎಸ್
Published 30 ಜನವರಿ 2022, 2:06 IST
Last Updated 30 ಜನವರಿ 2022, 2:06 IST
ಕೀರನ್ ಪೊಲಾರ್ಡ್‌ (ಎಎಫ್‌ಪಿ ಸಂಗ್ರಹ ಚಿತ್ರ)
ಕೀರನ್ ಪೊಲಾರ್ಡ್‌ (ಎಎಫ್‌ಪಿ ಸಂಗ್ರಹ ಚಿತ್ರ)   

ಸೇಂಟ್ ಜಾನ್ಸ್: ಭಾರತದ ವಿರುದ್ಧ ಫೆಬ್ರುವರಿಯಲ್ಲಿ ಕೋಲ್ಕತ್ತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಕ್ರಿಕೆಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಆಡಿದ ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಕೀರನ್ ಪೊಲಾರ್ಡ್ ಅವರಿಗೆ ನಾಯಕತ್ವ ವಹಿಸಲಾಗಿದೆ. ನಿಕೋಲಸ್ ಪೂರನ್ ಉಪನಾಯಕರಾಗಿ ಇರಲಿದ್ದಾರೆ. ಅಹಮದಾಬಾದ್‌ನಲ್ಲಿ ಏಕದಿನ ಸರಣಿ ಮುಕ್ತಾಯಗೊಂಡ ಬಳಿಕ ಫೆಬ್ರುವರಿ 16ರಿಂದ ಟ್ವೆಂಟಿ-20 ಸರಣಿ ಆರಂಭಗೊಳ್ಳಲಿದೆ.

ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಶಮರ್ ಬ್ರೂಕ್ಸ್, ಎನ್‌ಕ್ರುಮಾ ಬೊನ್ನರ್, ಕೆಮರ್ ರೋಚ್‌ಗೆ ಟ್ವೆಂಟಿ-20 ಸರಣಿಯಲ್ಲೂ ತಂಡಲ್ಲಿ ಆಡುವ ಅವಕಾಶ ದೊರೆತಿದೆ.

ಪೊಲಾರ್ಡ್, ಜೇಸನ್ ಹೋಲ್ಡರ್, ರೊವ್‌ಮನ್ ಪೊವೆಲ್ ಸೇರಿದಂತೆ ಅನೇಕ ಆಲ್‌ ರೌಂಡರ್‌ಗಳನ್ನು ತಂಡ ಒಳಗೊಂಡಿದೆ.

ಏಕದಿನ ಕ್ರಿಕೆಟ್ ಸರಣಿಗೆ ವೆಸ್ಟ್ ಇಂಡೀಸ್ ಈಗಾಗಲೇ ತಂಡವನ್ನು ಪ್ರಕಟಿಸಿದೆ. ಸರಣಿಯು ಫೆಬ್ರುವರಿ 6ರಿಂದ 11ರ ವರೆಗೆ ನಡೆಯಲಿದೆ.

ವೆಸ್ಟ್ ಇಂಡೀಸ್ ತಂಡ

ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪ ನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೊ, ರಾಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೋಸೇನ್, ಬ್ರಾಂಡನ್ ಕಿಂಗ್, ರೊವ್‌ಮನ್ ಪೊವೆಲ್, ಒಡೀನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್.

ಏಕದಿನ ಪಂದ್ಯಗಳ ವೇಳಾಪಟ್ಟಿ

ಫೆ. 06, ಭಾನುವಾರ: ಮೊದಲ ಏಕದಿನ, ಅಹಮದಾಬಾದ್
ಫೆ. 09, ಬುಧವಾರ: ದ್ವಿತೀಯ ಏಕದಿನ, ಅಹಮದಾಬಾದ್
ಫೆ. 11, ಶುಕ್ರವಾರ: ಅಂತಿಮ ಏಕದಿನ, ಅಹಮದಾಬಾದ್

ಟ್ವೆಂಟಿ-20 ಪಂದ್ಯಗಳ ವೇಳಾಪಟ್ಟಿ

ಫೆ. 16, ಬುಧವಾರ: ಮೊದಲ ಟ್ವೆಂಟಿ-20, ಕೋಲ್ಕತ್ತ
ಫೆ. 18, ಶುಕ್ರವಾರ: ದ್ವಿತೀಯ ಟ್ವೆಂಟಿ-20, ಕೋಲ್ಕತ್ತ
ಫೆ. 20, ಭಾನುವಾರ: ಅಂತಿಮ ಟ್ವೆಂಟಿ-20, ಕೋಲ್ಕತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.