ADVERTISEMENT

ಹಂಡ್ರೆಡ್ ಎ ಸೈಡ್‌ ಪ್ರಸ್ತಾವ ಬಂದರೆ ಚಿಂತನೆ: ವೆಂಕಿ

​ಪ್ರಜಾವಾಣಿ ವಾರ್ತೆ
Published 6 ಮೇ 2020, 21:01 IST
Last Updated 6 ಮೇ 2020, 21:01 IST

ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್‌ ಫ್ರ್ಯಾಂಚೈಸಿಯು ಹಂಡ್ರೆಡ್ ಎ ಸೈಡ್ (ನೂರು ಎಸೆತಗಳ ಕ್ರಿಕೆಟ್) ಟೂರ್ನಿಯ ಆಯೋಜಕರಿಂದ ಪ್ರಸ್ತಾವ ಬಂದರೆ ಬಂಡವಾಳ ವಿನಿಯೋಗಿಸುವ ಕುರಿತು ಚಿಂತನೆ ನಡೆಸಲಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ) ಆರಂಭಿಸಲು ಉದ್ದೇಶಿಸಿರುವ ಟೂರ್ನಿ ಇದು. ದಿ ಟೆಲಿಗ್ರಾಫ್‌ ಪತ್ರಿಕೆಗೆ ಕೆಕೆಆರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ಹೇಳಿಕೆ ನೀಡಿದ್ದಾರೆ.

‘ಇಸಿಬಿಯು ಪ್ರಸ್ತಾವ ನೀಡಿದರೆ ಕೂಲಂಕಷವಾಗಿ ಪರಿಶೀಲಿಸುತ್ತೇವೆ’ ಎಂದಿದ್ದಾರೆ.

ADVERTISEMENT

ಇಸಿಬಿಯು ಜುಲೈ ತಿಂಗಳಲ್ಲಿ ಈ ಟೂರ್ನಿಯನ್ನು ನಡೆಸಲು ಯೋಜಿಸಿತ್ತು. ಆದರೆ ಇದೀಗ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.

ಬಾಲಿವುಡ್ ತಾರೆ ಶಾರೂಕ್ ಖಾನ್ ಮಾಲೀಕತ್ವದ ಫ್ರ್ಯಾಂಚೈಸ್‌ ಆಗಿರುವ ಕೆಕೆಆರ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.