ADVERTISEMENT

ಕೆಕೆಆರ್‌ಗೆ ಸೌಥಿ; ಕಿಂಗ್ಸ್‌ಗೆ ರಶೀದ್‌

ಪಿಟಿಐ
Published 27 ಆಗಸ್ಟ್ 2021, 5:40 IST
Last Updated 27 ಆಗಸ್ಟ್ 2021, 5:40 IST
ಟಿಮ್ ಸೌಥಿ –ಎಎಫ್‌ಪಿ ಚಿತ್ರ
ಟಿಮ್ ಸೌಥಿ –ಎಎಫ್‌ಪಿ ಚಿತ್ರ   

ಕೋಲ್ಕತ್ತ: ನ್ಯೂಜಿಲೆಂಡ್‌ನ ಮಧ್ಯಮ ವೇಗಿ ಟಿಮ್ ಸೌಥಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ 14ನೇ ಆವೃತ್ತಿಯ ಎರಡನೇ ಲೆಗ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಲಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ತಂಡ ತೊರೆದಿರುವ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಬದಲಿಗೆ ಸೌಥಿ ಅವರನ್ನು ಕರೆಸಿಕೊಳ್ಳಲಾಗಿದೆ ಎಂದು ಕೆಕೆಆರ್ ಪ್ರಕಟಣೆ ತಿಳಿಸಿದೆ. 2020ರ ಐಪಿಎಲ್‌ ಹರಾಜಿನಲ್ಲಿ ₹ 15.5 ಕೋಟಿ ಮೊತ್ತಕ್ಕೆ ಕೆಕೆಆರ್‌ ತಂಡ ಕಮಿನ್ಸ್ ಅವರನ್ನು ಪಡೆದುಕೊಂಡಿತ್ತು. ಮೊದಲ ಲೆಗ್‌ನ ಎಲ್ಲ ಏಳು ಪಂದ್ಯಗಳಲ್ಲಿ ಆಡಿದ್ದ ಅವರು ಒಂಬತ್ತು ವಿಕೆಟ್ ಕಬಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಎದುರು ಗಳಿಸಿದ 66 ರನ್ ಸೇರಿದಂತೆ ಒಟ್ಟು 93 ರನ್‌ ಕೂಡ ಕಲೆ ಹಾಕಿದ್ದಾರೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಗಳಿಸಿದ ಮೂರನೇ ಆಟಗಾರ ಆಗಿರುವ ಸೌಥಿ ಈ ಹಿಂದೆ ರಾಜಸ್ತಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿಯಲ್ಲಿ ಆಡಿದ್ದಾರೆ.

ADVERTISEMENT

ಎರಡನೇ ಲೆಗ್‌ಗೆ ರಾಜಸ್ತಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಕೆಲವು ಬದಲಾವಣೆಗಳನ್ನು ಮಾಡಿದೆ. ರಾಜಸ್ತಾನ್ ರಾಯಲ್ಸ್‌ ತಂಡ ಇಂಗ್ಲೆಂಡ್‌ನ ಜೊಫ್ರಾ ಆರ್ಚರ್ ಬದಲಿಗೆ ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್‌ ಅವರನ್ನು ಕರೆಸಿಕೊಂಡಿದೆ. ಆ್ಯಂಡ್ರ್ಯೂ ಟೈ ಬದಲಿಗೆ ದಕ್ಷಿಣ ಆಫ್ರಿಕಾದ ತಬ್ರೇಜ್ ಶಂಸಿ ತಂಡವನ್ನು ಸೇರಿಕೊಂಡಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ ರಿಲಿ ಮೆರಿಡಿತ್ ಬದಲಿಗೆ ನೇಥನ್ ಎಲಿಸ್ ಅವರನ್ನು ಮತ್ತು ಜೇ ರಿಚರ್ಡ್ಸನ್ ಬದಲಿಗೆ ಆದಿಲ್ ರಶೀದ್ ಅವರನ್ನು ಕರೆಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.