ADVERTISEMENT

ರಾಹುಲ್‌ಗೆ 'ಹೃದಯ' ಕೊಟ್ಟ ಅಥಿಯಾ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 16:51 IST
Last Updated 18 ಜನವರಿ 2020, 16:51 IST
ಕೆ.ಎಲ್. ರಾಹುಲ್ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಚಿತ್ರ
ಕೆ.ಎಲ್. ರಾಹುಲ್ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಚಿತ್ರ   

ಬೆಂಗಳೂರು: ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ತಾರೆ ಸುನಿಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಅವರ ‘ಸ್ನೇಹ’ದ ಕುರಿತು ಈಗಾಗಲೇ ಬಹಳಷ್ಟು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ, ಶನಿವಾರ ರಾಹುಲ್ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಚಿತ್ರವೊಂದಕ್ಕೆ ಸ್ವತಃ ಅಥಿಯಾವರು ‘ಹೃದಯ’ ಗುರುತಿನ ಎಮೊಜಿ ಹಾಕಿರುವುದು ಸಖತ್ ಸುದ್ದಿಯಾಗಿದೆ. ಪಬ್ಲಿಕ್ ಫೋನ್ ಬೂತ್‌ನಲ್ಲಿ ಮಾತನಾಡುತ್ತಿರುವ ರಾಹುಲ್ ಮತ್ತು ಅವರೊಂದಿಗೆ ಅಥಿಯಾ ಇರುವ ಚಿತ್ರ ಇದಾಗಿದೆ. ಈ ಚಿತ್ರವನ್ನು ಹಾಕಿರುವ ರಾಹುಲ್ ‘ಹಲೋ ದೇವಿಪ್ರಸಾದ್..’ ಎಂಬ ಒಕ್ಕಣೆ ಬರೆದಿದ್ದಾರೆ.

ಇದು ಸುನಿಲ್ ಶೆಟ್ಟಿ ಅಭಿನಯದ ಹೆರಾಪೇರಿ ಚಿತ್ರದ ಅಣಕು ಚಿತ್ರವಾಗಿದೆ. ಆದ್ದರಿಂದ ಕ್ರಿಕೆಟಿಗರೂ ಸೇರಿದಂತೆ ಹಲವಾರು ಅಭಿಮಾನಿಗಳು ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ಹಾಕಿದ್ದಾರೆ. ಸ್ವತಃ ಸುನೀಲ್ ಶೆಟ್ಟಿಯವರೇ ನಗುವ ಎಮೊಜಿ ಹಾಕಿದ್ದಾರೆ.

ADVERTISEMENT

ರಾಹುಲ್ ರಾಜ್‌ಕೋಟ್ ಪಂದ್ಯದಲ್ಲಿ ಆಲ್‌ರೌಂಡ್ ಆಟವಾಡಿ, ಪಂದ್ಯಶ್ರೇಷ್ಠರಾಗಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಗಳಿಸಿದ ಸಾಧನೆಯನ್ನೂ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.