ADVERTISEMENT

ತವರಿನಲ್ಲಿ ನೈಟ್‌ರೈಡರ್ಸ್‌ಗೆ ಜಯದ ಸವಿ

ಐಪಿಎಲ್ ಕ್ರಿಕೆಟ್

ಪಿಟಿಐ
Published 28 ಏಪ್ರಿಲ್ 2019, 19:52 IST
Last Updated 28 ಏಪ್ರಿಲ್ 2019, 19:52 IST
ಅರ್ಧಶತಕ ಗಳಿಸಿದ ಆ್ಯಂಡ್ರೆ ರಸೆಲ್ ಅವರ ಬ್ಯಾಟಿಂಗ್ ವೈಖರಿ
ಅರ್ಧಶತಕ ಗಳಿಸಿದ ಆ್ಯಂಡ್ರೆ ರಸೆಲ್ ಅವರ ಬ್ಯಾಟಿಂಗ್ ವೈಖರಿ   

ಕೋಲ್ಕತ್ತ:ಏಳು ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡ ಭಾನುವಾರ ರಾತ್ರಿ ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ಗೆಲುವಿನ ನಗೆ ಸೂಸಿತು.

ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬಳಗ 34 ರನ್‌ಗಳಿಂದ ಗೆದ್ದಿತು.

ಆ್ಯಂಡ್ರೆ ರಸೆಲ್ (ಔಟಾಗದೆ 80; 40ಎಸೆತ, 6ಬೌಂಡರಿ, 8ಸಿಕ್ಸರ್), ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಮತ್ತು ಕ್ರಿಸ್ ಲಿನ್ ಅವರು ಗಳಿಸಿದ ಅರ್ಧಶತಕಗಳಿಂದಾಗಿ ಆತಿಥೇಯರು 232 ರನ್‌ ಗಳಿಸಿದ್ದರು.

ADVERTISEMENT

ಗುರಿ ಬೆನ್ನತ್ತಿದ ಮುಂಬೈ ಪರ ಹಾರ್ದಿಕ್ ಪಾಂಡ್ಯ (91; 34 ಎ, 9 ಸಿ, 6 ಬೌಂ) ಏಕಾಂಗಿ ಹೋರಾಟ ನಡೆಸಿದರು. ಇತರ ಯಾರಿಗೂ ಎದುರಾಳಿ ತಂಡದ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಲು ಆಗಲಿಲ್ಲ.

ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ನಿರ್ಧಾರ ತಪ್ಪು ಎಂಬುದು ಸಾಬೀತಾಯಿತು.

ವಿಭಿನ್ನ ಯೋಜನೆಯೊಂದಿಗೆ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಬಳಗದ ಮುಂದೆ ಮುಂಬೈ ಬೌಲರ್‌ಗಳು ಮೂಕರಾದರು. ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (76; 45ಎ, 4ಸಿ, 6 ಬೌಂ) ಮತ್ತು ಕ್ರಿಸ್ ಲಿನ್ (54; 29ಎ, 2ಸಿ, 8ಬೌಂ) ಮೊದಲ ವಿಕೆಟ್‌ಗೆ 96 ರನ್‌ ಗಳಿಸಿದರು. ಕ್ರಿಸ್ ಲಿನ್ ಔಟಾದ ನಂತರ ಕ್ರೀಸ್‌ಗೆ ಬಂದ ರಸೆಲ್‌ ಅವರು ಗಿಲ್ ಜೊತೆಗೂಡಿ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 62 ರನ್‌ಗಳನ್ನು ಸೇರಿಸಿದರು. ಗಿಲ್ ಔಟಾದ ನಂತರವೂ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಸ್ಫೋಟಕ ಬ್ಯಾಟಿಂಗ್‌ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.