ADVERTISEMENT

ಪೇಟಿಎಂನಲ್ಲಿ ಕೆಪಿಎಲ್ ಟಿಕೆಟ್ ಮಾರಾಟ ಆರಂಭ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:21 IST
Last Updated 3 ಆಗಸ್ಟ್ 2019, 19:21 IST

ಬೆಂಗಳೂರು:ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಗಳ ಟಿಕೆಟ್ ಮಾರಾಟಕ್ಕಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಪೇಟಿಎಂ ಇನ್‌ಸೈಡರ್ ಜತೆ ಒಪ್ಪಂದ ಮಾಡಿಕೊಂಡಿದೆ.

ಪೇಟಿಎಂ ಆ್ಯಪ್‌ನಲ್ಲಿ ಟೆಕೆಟ್‌ಗಳು ಈಗ ಮಾರಾಟಕ್ಕೆ ಲಭ್ಯ ಇವೆ.ಟೂರ್ನಿಯು ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ. ನಂತರ 15 ದಿನಗಳ ಕಾಲ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳ ಮೌಲ್ ಯ₹ 50ರಿಂದ ₹ 2 ಸಾವಿರವರೆಗೆ ಇದೆ. ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ನಡೆಯುವ ಪಂದ್ಯಗಳಲ್ಲಿ ₹ 50 ರಿಂದ 300ರವರೆಗೆ ಮೌಲ್ಯಗಳ ಟಿಕೆಟ್ ಇವೆ.

ಪಂದ್ಯ ನಡೆಯುವ ಸ್ಥಳಗಳಲ್ಲಿ ಟಿಕೆಟ್ ಕೌಂಟರ್‌ಗಳಲ್ಲಿಯೂ ಟಿಕೆಟ್‌ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಅಭಿಮಾನಿಗಳು ಪೇಟಿಎಂ ಇನ್‌ಸೈಡರ್ ಆ್ಯಪ್ ಮೂಲಕವೂ ಟಿಕೆಟ್ ಖರೀದಿಸಬಹುದು. ಹೋದ ಋತುವಿನಲ್ಲಿ ಆ್ಯಪ್ ಮೂಲಕ ಶೇ. 95ರಷ್ಟು ಟಿಕೆಟ್ ಮಾರಾಟ ಮಾಡಿಲಾಗಿತ್ತು.

ADVERTISEMENT

ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಪೇಟಿಯಂ ಇನ್‌ಸೈಡರ್ ಕ್ಯೂಆರ್ ಕೋಡ್‌ನ್ನೂ ಪ್ರಸ್ತುತಪಡಿಸುತ್ತಿದೆ. ಆ್ಯಪ್ ಮೂಲಕ ಕೋಡ್ ಅನ್ನು ಸ್ಕ್ಯಾನ್ ಮೂಲಕ ಟಿಕೆಟ್‌ನ ಮೊತ್ತವನ್ನು ನೀಡಿ ಟಿಕೆಟ್ ಖರೀದಿಸಬಹುದು.

‘ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಂದ್ಯಗಳನ್ನು ವೀಕ್ಷಿಸಲು ನೆರವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಜನರು ಬಂದು ಆಟಗಾರರಿಗೆ ಪ್ರೋತ್ಸಾಹ ನೀಡಲು ಇದು ಸಹಕಾರಿ. ಆ್ಯಪ್ ಮೂಲಕ ಟಿಕೆಟ್‌ ಮಾರಾಟಕ್ಕೆ ಹೋದ ವರ್ಷ ಬಹಳಷ್ಟು ಬೇಡಿಕೆ ವ್ಯಕ್ತವಾಗಿತ್ತು’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.