ADVERTISEMENT

ಕೆಎಸ್‌ಸಿಎ ಕ್ರಿಕೆಟ್‌: ನಾಗಭರತ್, ಆದಿತ್ಯ ಶತಕ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 17:17 IST
Last Updated 24 ಜುಲೈ 2021, 17:17 IST
ಆದಿತ್ಯ ಸೋಮಣ್ಣ
ಆದಿತ್ಯ ಸೋಮಣ್ಣ   

ಬೆಂಗಳೂರು: ನಾಗಭರತ್‌ (120, 121 ಎಸೆತ, 7 ಬೌಂಡರಿ, 5 ಸಿಕ್ಸರ್‌) ಅವರು ಗಳಿಸಿದ ಭರ್ಜರಿ ಶತಕದ ನೆರವಿನಿಂದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್‌ ಕ್ಲಬ್(2) ತಂಡವು ಜಯ ಗಳಿಸಿತು. ಮಿರ್ಜಾ ಇಸ್ಮಾಯಿಲ್‌ ಟ್ರೋಫಿಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಒಂದನೇ ಗುಂಪು ಎರಡನೇ ಡಿವಿಷನ್‌ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಶನಿವಾರ ಉತ್ತಮ ರನ್‌ರೇಟ್ ಆಧಾರದಲ್ಲಿ ಸ್ವಸ್ತಿಕ್ ಯೂನಿಯನ್‌ ಕ್ರಿಕೆಟ್‌ ಕ್ಲಬ್ (1) ತಂಡವನ್ನು ಪರಾಭವಗೊಳಿಸಿತು. ಮಳೆಯಿಂದಾಗಿ ಪಂದ್ಯವನ್ನು ಪೂರ್ಣಗೊಳಿಸಲಾಗಲಿಲ್ಲ.

ಮತ್ತೊಂದು ಪಂದ್ಯದಲ್ಲಿ ಆದಿತ್ಯ ಸೋಮಣ್ಣ (ಔಟಾಗದೆ 106, 99 ಎಸೆತ, 5 ಬೌಂಡರಿ, 7 ಸಿಕ್ಸರ್‌) ಅವರು ಗಳಿಸಿದ ಶತಕವು ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ತಂಡಕ್ಕೆ ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್ ಎದುರು 145 ರನ್‌ಗಳ ಜಯ ತಂದುಕೊಟ್ಟಿತು.

ಇನ್ನೊಂದು ಪಂದ್ಯದಲ್ಲಿ ಸ್ಟಾಲಿನ್ ಹೂವರ್ ಗಳಿಸಿದ ಐದು ವಿಕೆಟ್‌ಗಳ ಬಲದಿಂದ ಫ್ರೆಂಡ್ಸ್ ಯೂನಿಯನ್ (1) ತಂಡವು ಮಾಡರ್ನ್ ಕ್ರಿಕೆಟ್ ಕ್ಲಬ್ ಎದುರು ಜಯ ಸಾಧಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರು: ಸ್ವಸ್ತಿಕ್ ಯೂನಿಯನ್ ಸಿಸಿ (2): 50 ಓವರ್‌ಗಳಲ್ಲಿ 9 ವಿಕೆಟ್‌ಗೆ 255 (ನಾಗ ಭರತ್‌ 120, ಚಿನ್ಮಯ್ ಎನ್‌.ಎ. 68; ಕೆ.ಎಸ್‌.ದೇವಯ್ಯ 25ಕ್ಕೆ2, ನವೀನ್ ಎಂ.ಜಿ. 58ಕ್ಕೆ 4, ಶ್ರೇಯಸ್ ಗೋಪಾಲ್‌ 43ಕ್ಕೆ 2). ಸ್ವಸ್ತಿಕ್‌ ಯೂನಿಯನ್ ಸಿಸಿ (1): 29.1 ಓವರ್‌ಗಳಲ್ಲಿ 116 (ಸಮರ್ಥ್ ಆರ್‌. 25, ರಕ್ಷಿತ್‌ ಎಸ್‌. ಔಟಾಗದೆ 41, ರಾಜ್‌ ಅತುಲ್ ಗಾಲ 34ಕ್ಕೆ 2, ಕಾರ್ತಿಕ್ ಸಿ.ಎ. 26ಕ್ಕೆ 3). ಫಲಿತಾಂಶ:ಸ್ವಸ್ತಿಕ್ ಯೂನಿಯನ್ ಸಿಸಿಗೆ (2) ಉತ್ತಮ ರನ್‌ರೇಟ್ ಆಧಾರದಲ್ಲಿ ಗೆಲುವು.

ಮೌಂಟ್‌ ಜಾಯ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 279 (ಶರತ್ ಬೇಲೂರು ರವಿ 37, ಅರುಣ್ ಮೊನ್ನಪ್ಪ ಪಿ.ಸಿ. 26, ಭರತನ್ ಧುರಿ 36, ಆದಿತ್ಯ ಸೋಮಣ್ಣ ಔಟಾಗದೆ 106;ಅಭಿಷೇಕ್ ಪ್ರಭಾಕರ್ 26ಕ್ಕೆ 2). ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್‌ (ಚಿಂತಾಮಣಿ): 32 ಓವರ್‌ಗಳಲ್ಲಿ 134 (ಅಬ್ದುಲ್ ಮಜೀದ್‌ 42; ಅಜಯ್ ಕೃಷ್ಣನ್‌ 27ಕ್ಕೆ 3, ಶೀತಲ್ ಕುಮಾರ್‌ 23ಕ್ಕೆ 4). ಫಲಿತಾಂಶ: ಮೌಂಟ್‌ ಜಾಯ್ ಕ್ರಿಕೆಟ್‌ ಕ್ಲಬ್‌ಗೆ 145 ರನ್‌ಗಳ ಜಯ.

ಮಾಡರ್ನ್‌ ಕ್ರಿಕೆಟ್ ಕ್ಲಬ್‌: 48.2 ಓವರ್‌ಗಳಲ್ಲಿ 184 (ಅನೀಶ್ವರ್ ಗೌತಮ್‌ 21, ಪೃಥ್ವಿ ಸದಾನಂದ 86; ಸ್ಟಾಲಿನ್ ಹೂವರ್‌ 32ಕ್ಕೆ 5, ರಿಷಿ ಬೋಪಣ್ಣ ಎಸ್‌.ಎ. 35ಕ್ಕೆ 3). ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್‌ ಕ್ಲಬ್ (1): 33 ಓವರ್‌ಗಳಲ್ಲಿ 6 ವಿಕೆಟ್‌ಗೆ 172 (ವಿನಯ್ ಎನ್‌.ಸಾಗರ್‌ 44, ಶಶೀಂದ್ರ ಕೆ. 40, ಮಿಥುನ್ ಭಟ್‌ ಔಟಾಗದೆ 37, ಶಶಾಂಕ್ ಕೆ. 49ಕ್ಕೆ 2, ಅಶ್ವನಿ ಕುಮಾರ್‌ 39ಕ್ಕೆ 2). ಫಲಿತಾಂಶ: ಮಳೆಯಿಂದಾಗಿ ಪೂರ್ಣಗೊಳ್ಳದ ಪಂದ್ಯ, ಉತ್ತಮ ರನ್‌ರೇಟ್ ಆಧಾರದಲ್ಲಿ ಫ್ರೆಂಡ್ಸ್ ಯೂನಿಯನ್ ಸಿಸಿಗೆ (1)
ಗೆಲುವು.

ಸೋಷಿಯಲ್ ಕ್ರಿಕೆಟರ್ಸ್: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 338 (ಆದರ್ಶ್ ಪ್ರಜ್ವಲ್‌ ಎಸ್‌. 50, ಅನೀಶ್ ಕೆ.ವಿ. 65, ಆಕರ್ಷ್ ಬಲ್ಲಾಳ್‌ 32, ವೈಶಾಖ್ ವಿ. 52, ಪೃಥ್ವಿರಾಜ್ 80; ಗೌತಮ್ ಸಾಗರ್ 54ಕ್ಕೆ2, ಕೆ.ಆದಿತ್ಯನ್ 54ಕ್ಕೆ 2, ಮೆಕ್‌ನೀಲ್ ನೊರೊನ್ಹಾ 31ಕ್ಕೆ2). ಕೆಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌: 31.1 ಓವರ್‌ಗಳಲ್ಲಿ 4 ವಿಕೆಟ್‌ಗೆ 173 (ಮೆಕ್‌ನೀಲ್ ಹ್ಯಾಡ್ಲಿ 30, ಜಸ್ವಂತ್ ಆಚಾರ್ಯ 69, ಶುಭಾಂಗ್ ಹಗ್ಡೆ 32; ಪೃಥ್ವಿರಾಜ್‌ 18ಕ್ಕೆ 2). ಫಲಿತಾಂಶ: ಮಳೆಯಿಂದಾಗಿ ಪೂರ್ಣಗೊಳ್ಳದ ಪಂದ್ಯ, ಉತ್ತಮ ರನ್‌ರೇಟ್ ಆಧಾರದಲ್ಲಿ ಸೋಷಿಯಲ್ ಕ್ರಿಕೆಟರ್ಸ್‌ಗೆ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.