ಬೆಂಗಳೂರು: ಇದೇ 22ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟ್ವೆಂಟಿ20 ಪಂದ್ಯದ ಟಿಕೆಟ್ ಮಾರಾಟ ಶುಕ್ರವಾರ ಆನ್ಲೈನ್ನಲ್ಲಿ (www.ksca.cricket) ಆರಂಭವಾಗಲಿದೆ.
ಬೆಳಿಗ್ಗೆ 10ರಿಂದ ಮಾರಾಟ ನಡೆಯಲಿದೆ. ಒಬ್ಬರಿಗೆ ಎರಡು ಟಿಕೆಟ್ ಮಾತ್ರ ನೀಡಲಾಗುವುದು.
₹500 ರಿಂದ ₹10 ಸಾವಿರದ ಮುಖಬೆಲೆಯ ಟಿಕೆಟ್ಗಳು ಲಭ್ಯ ಇವೆ ಎಂದು ಕೆಎಸ್ಸಿಎ ತಿಳಿಸಿದೆ. 16ರಿಂದ ಕ್ರೀಡಾಂಗಣದ ಬಾಕ್ಸ್ ಆಫೀಸ್ನಲ್ಲಿ ಟಿಕೆಟ್ ಮಾರಾಟ ನಡೆಯಲಿದ್ದು, ₹500ರ ಟಿಕೆಟ್ಗಳು ಮಾತ್ರ ಸಿಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.