ಬೆಂಗಳೂರು: ಬಿ.ಜಿ. ತೇಜಸ್ವಿನಿ (26ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಣಿ ಟ್ರೋಫಿ ಮಹಿಳಾ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 35 ರನ್‌ಗಳಿಂದ ಮಣಿಸಿತು.
ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹುಬ್ಬಳ್ಳಿ ತಂಡವು ಮೋನಿಕಾ ಸಿ. ಪಟೇಲ್ (44, 27ಎ) ಅವರ ಆಟದಿಂದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಮಂಗಳೂರು ತಂಡವು 128 ರನ್ ಗಳಿಸಲು ಮಾತ್ರ ಶಕ್ತವಾಯಿತು. ಲಿಯಾಂಕಾ ಶೆಟ್ಟಿ (46, 38ಎ) ಏಕಾಂಗಿ ಹೋರಾಟ ತೋರಿದರು.
ದಿನದ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಶಿವಮೊಗ್ಗ ಲಯನೆಸ್ ಎದುರು 27 ರನ್‌ಗಳ ಸುಲಭ ಜಯ ದಾಖಲಿಸಿತು.
ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರುಗಳಲ್ಲಿ 5ಕ್ಕೆ 163 (ನಂದನಿ ಚವ್ಹಾಣ್ 39, ಮೋನಿಕಾ ಸಿ. ಪಟೇಲ್ 44, ಪಿ. ಸಲೋನಿ 7ಕ್ಕೆ2) ಮಂಗಳೂರು ಡ್ರ್ಯಾಗನ್ಸ್: 20 ಓವರುಗಳಲ್ಲಿ 8ಕ್ಕೆ 128 (ಲಿಯಾಂಕಾ ಶೆಟ್ಟಿ 46, ಪ್ರಿಯಾ ಚವ್ಹಾಣ್ 26ಕ್ಕೆ2, ಬಿ.ಜಿ. ತೇಜಸ್ವಿನಿ 26ಕ್ಕೆ4). ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 35 ರನ್ ಜಯ
ಮೈಸೂರು ವಾರಿಯರ್ಸ್: 20 ಓವರುಗಳಲ್ಲಿ 6ಕ್ಕೆ 140 (ಶುಭಾ ಸತೀಶ್ 64, ಕುಸುಮಾ ನಾಗರಾಜು 32, ಸೈನಾ ಕಪೂರ್ 23ಕ್ಕೆ2) ಶಿವಮೊಗ್ಗ ಲಯನೆಸ್: 20 ಓವರ್‌ಗಳಲ್ಲಿ 7ಕ್ಕೆ 113 (ರೋಶಿನಿ ಕಿರಣ್ 41, ವಂದಿತಾ ರಾವ್ 22ಕ್ಕೆ2). ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 27 ರನ್ ಗೆಲುವು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.