ಕೊಲಂಬೊ: ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿ ಆಶ್ರಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನ ಸಿದ್ದತೆಗಾಗಿ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) - 2025 ಅನ್ನು ಮುಂದೂಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ತಿಳಿಸಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
2026ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಟಿ-20 ವಿಶ್ವಕಪ್ ಆಯೋಜನೆಗೊಂಡಿದೆ.
ವಿಶ್ವಕಪ್ ಪಂದ್ಯಗಳು ನಡೆಯುವ ಕ್ರೀಡಾಂಗಣಗಳು ಅಂತರರಾಷ್ಟ್ರೀಯ ಮಟ್ಟದ ಪಂದ್ಯದ ಬೇಡಿಕೆಯನ್ನು ಪೂರೈಸಲು ಪರಿಪೂರ್ಣವಾಗಿರಬೇಕು ಎಂದು ಐಸಿಸಿ ಸೂಚಿಸಿತ್ತು. ಹಾಗಾಗಿ ಲಂಕಾ ಪ್ರೀಮಿಯರ್ ಲೀಗ್ ಮುಂದೂಡಿದ್ದು, ವಿಶ್ವಕಪ್ ಸಿದ್ದತೆಗೆ ಸಮಯ ಸಿಗಲಿದೆ ಎಂದು ಎಸ್‌ಎಲ್‌ಸಿ ತಿಳಿಸಿದೆ.
ವಿಶ್ವಕಪ್‌ಗೂ ಮುನ್ನ ಕ್ರೀಡಾಂಗಣದ ಮೂಲಸೌಕರ್ಯ ಹೆಚ್ಚಿಸುವುದು, ಆಟಗಾರರಿಗೆ ನೀಡಬೇಕಾದ ಸೌಲಭ್ಯಗಳನ್ನು ಆಧುನೀಕರಣ ಮಾಡುವುದು, ಪಂದ್ಯದ ನೇರ ಪ್ರಸಾರ ಗುಣಮಟ್ಟ ಹೆಚ್ಚಿಸುವುದು ಮತ್ತು ಇತರೆ ಅಗತ್ಯತೆಗಳನ್ನು ಸಿದ್ದಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಯಿತು ಎಂದು ಹೇಳಿದೆ.
ಶ್ರೀಲಂಕಾದ ಒಟ್ಟು 4 ಕ್ರೀಡಾಂಗಣಗಳು ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ. ಈಗಾಗಲೇ ಮೂರು ಕ್ರೀಡಾಂಗಣಗಳ ನವೀಕರಣ ಕೆಲಸ ಆರಂಭವಾಗಿದ್ದು, ಮಹಿಳಾ ವಿಶ್ವಕಪ್ ನಡೆಯುತ್ತಿರುವ ಆರ್. ಪ್ರೇಮದಾಸ ಕ್ರೀಡಾಂಗಣವನ್ನು ಪಂದ್ಯಾವಳಿ ಮುಗಿದ ನಂತರ ನವೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.
ಎಲ್‌ಪಿಎಲ್ ಪಂದ್ಯಾವಳಿಯನ್ನು ಸೂಕ್ತವಾದ ಸಮಯದಲ್ಲಿ ಮರು ನಿಗದಿಪಡಿಸಲಾಗುತ್ತದೆ ಎಂದು ಮಂಡಳಿ ಭರವಸೆ ನೀಡಿದೆ.
2026ರ ಟಿ-20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.