ADVERTISEMENT

ಮಹಾರಾಜ ಟ್ರೋಫಿ: ಫೈನಲ್‌ಗೆ ಮೈಸೂರು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
<div class="paragraphs"><p>ಕ್ರಿಕೆಟ್ (ಸಾಂಕೇತಿಕ ಚಿತ್ರ)</p></div>

ಕ್ರಿಕೆಟ್ (ಸಾಂಕೇತಿಕ ಚಿತ್ರ)

   

ಬೆಂಗಳೂರು: ಎಸ್‌.ಯು. ಕಾರ್ತಿಕ್ ಅವರ ಅರ್ಧಶತಕ ಹಾಗೂ ಕೆ.ಗೌತಮ್‌ ಅವರ ಉತ್ತಮ ಬೌಲಿಂಗ್‌ ನೆರವಿನಿಂದ ಬಲದಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪ್ರವೇಶ ಮಾಡಿತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ತಂಡವು ಹುಬ್ಬಳ್ಳಿ ಟೈಗರ್ಸ್‌ ತಂಡದ ವಿರುದ್ಧ 9 ರನ್‌ಗಳ ಜಯ ಗಳಿಸಿತು.

ADVERTISEMENT

ಮೈಸೂರು ವಾರಿಯರ್ಸ್ ತಂಡ, ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಹುಬ್ಬಳ್ಳಿ  ತಂಡದ ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ಎಲ್‌. ಆರ್. ಕುಮಾರ್ ಅವರಿಬ್ಬರ ದಾಳಿಯಿಂದಾಗಿ ಮೈಸೂರು ತಂಡವು ಆರಂಭಿಕ ಆಘಾತ ಅನುಭವಿಸಿತು. 14 ರನ್‌ಗಳಾಗುವಷ್ಟರಲ್ಲಿ ಕಾರ್ತಿಕ್ ಮತ್ತು ಕರುಣ್ ನಾಯರ್ ಅವರು ಔಟಾದರು.

ಈ ಹಂತದಲ್ಲಿ ಎಸ್‌.ಯು. ಕಾರ್ತಿಕ್ (53; 43ಎ, 4X4, 6X2) ಮತ್ತು ಶರತ್ ಶ್ರೀನಿವಾಸ್ (26; 26ಎ) 61 ರನ್ ಸೇರಿಸಿದರು. ತಂಡದ ಮೊತ್ತವು ಮೂರಂಕಿ ಮುಟ್ಟುವ ಮುನ್ನವೇ ಈ ಜೊತೆಯಾಟವೂ ಮುರಿಯಿತು. 
ಆದರೆ ಕೆಳಕ್ರಮಾಂಕದಲ್ಲಿ ಮನೋಜ್ ಭಾಂಡಗೆ, ಹರ್ಷಿಲ್ ಧಮಾನಿ ಮತ್ತು ವಿದ್ಯಾಧರ್ ಪಾಟೀಲ (11 ರನ್) ಅವರು  ಕಾಣಿಕೆ ನೀಡಿದ್ದರಿಂದ ಮೊತ್ತವು ಹೆಚ್ಚಿತು. ಮೈಸೂರು ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 177 ರನ್ ಗಳಿಸಿತು. 

ಗೆಲುವಿನ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್‌ ತಂಡವು ಎದುರಾಳಿ ತಂಡದ ಬಿಗುವಿನ ದಾಳಿಗೆ ತಕ್ಕ ಉತ್ತರ ನೀಡಲಿಲ್ಲ. ಆರಂಭಿಕ ಆಟಗಾರ ತಿಪ್ಪಾರೆಡ್ಡಿ (33) ಹೊರತಾಗಿ ಇತರ ಬ್ಯಾಟರ್‌ಗಳಾದ ಮೊಹಮ್ಮದ್‌ ತಾಹಾ (8), ಕೃಷ್ಣನ್‌ ಶ್ರೀಜಿತ್‌ (20), ಅನೀಶ್ವರ್‌ ಗೌತಮ್‌ (6), ಮನೀಶ್‌ ಪಾಂಡೆ (6) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮೂರು ವಿಕೆಟ್‌ ಕೆಡವಿದ ಕೆ.ಗೌತಮ್‌ ಹುಬ್ಬಳ್ಳಿ ತಂಡಕ್ಕೆ ಮುಳ್ಳಾಗಿ ಕಾಡಿದರು.

ಆರನೇ ವಿಕೆಟ್‌ ಜೊತೆಯಾದ ಕಾರ್ತಿಕೇಯ ಕೆ.ಪಿ. (61) ಮತ್ತು ಮನ್ವಂತ್‌ ಕುಮಾರ್‌ (21) ಅವರ ಹೋರಾಟ ಫಲ ನೀಡಲಿಲ್ಲ. 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 168 ರನ್‌ ಗಳಿಸಲಷ್ಟೆ ಶಕ್ತವಾಯಿತು. 


ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 177 (ಎಸ್‌.ಯು. ಕಾರ್ತಿಕ್ 53, ಶರತ್ ಶ್ರೀನಿವಾಸ್ 26, ಸುಮಿತ್ ಕುಮಾರ್ 18, ಮನೋಜ್ ಭಾಂಡಗೆ 26, ಹರ್ಷಿಲ್ ಧಮಾನಿ 14, ಎಲ್‌.ಆರ್. ಕುಮಾರ್ 37ಕ್ಕೆ3, ವಿದ್ವತ್ ಕಾವೇರಪ್ಪ 40ಕ್ಕೆ2) 

ಹುಬ್ಬಳ್ಳಿ ಟೈಗರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 168 (ಕಾರ್ತಿಕೇಯ ಕೆ.ಪಿ. 61, ತಿಪ್ಪಾರೆಡ್ಡಿ  33, ಮನ್ವಂತ್‌ ಕುಮಾರ್‌ 21, ಕೆ.ಗೌತಮ್‌ 29ಕ್ಕೆ3,) ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 9 ರನ್‌ಗಳ ಜಯ. ಪಂದ್ಯದ ಆಟಗಾರ: ಕೆ.ಗೌತಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.