ADVERTISEMENT

ಕ್ರಿಕೆಟ್‌: ಲಾಬುಶೇನ್‌ ಶತಕ

ಏಜೆನ್ಸೀಸ್
Published 12 ಡಿಸೆಂಬರ್ 2019, 20:00 IST
Last Updated 12 ಡಿಸೆಂಬರ್ 2019, 20:00 IST
ಲಾಬುಶೇನ್‌ –ಎಎಫ್‌ಪಿ ಚಿತ್ರ
ಲಾಬುಶೇನ್‌ –ಎಎಫ್‌ಪಿ ಚಿತ್ರ   

ಪರ್ತ್‌, ಆಸ್ಟ್ರೇಲಿಯಾ: ಮಾರ್ನಸ್‌ ಲಾಬುಚಾನ್‌ (ಬ್ಯಾಟಿಂಗ್‌ 110; 202ಎಸೆತ, 14ಬೌಂಡರಿ, 1ಸಿಕ್ಸರ್‌) ಗುರುವಾರ ವೃತ್ತಿಬದುಕಿನ ಮೂರನೇ ಟೆಸ್ಟ್‌ ಶತಕ ಸಿಡಿಸಿ ಸಂಭ್ರಮಿಸಿದರು. ಅವರ ದಿಟ್ಟ ಆಟ ದಿಂದಾಗಿ ಆಸ್ಟ್ರೇಲಿಯಾ ತಂಡ ನ್ಯೂಜಿ ಲೆಂಡ್‌ ಎದುರಿನ ‘ಪಿಂಕ್‌ ಬಾಲ್‌’ ಟೆಸ್ಟ್‌ನಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿದೆ.

ಪರ್ತ್‌ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಟಿಮ್‌ ಪೇನ್‌ ಸಾರಥ್ಯದ ಆಸ್ಟ್ರೇಲಿಯಾ, ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 248ರನ್‌ ಕಲೆಹಾಕಿದೆ.

ಸಂಕ್ಷಿಪ್ತ ಸ್ಕೋರ್‌

ADVERTISEMENT

ಆಸ್ಟ್ರೇಲಿಯಾ; ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 248 (ಡೇವಿಡ್‌ ವಾರ್ನರ್‌ 43, ಜೋ ಬರ್ನ್ಸ್‌ 9, ಮಾರ್ನಸ್‌ ಲಾಬುಚಾನ್‌ ಬ್ಯಾಟಿಂಗ್‌ 110, ಸ್ಟೀವ್‌ ಸ್ಮಿತ್‌ 43, ಮ್ಯಾಥ್ಯೂ ವೇಡ್‌ 12, ಟ್ರಾವಿಸ್‌ ಹೆಡ್‌ ಬ್ಯಾಟಿಂಗ್‌ 20; ಟಿಮ್‌ ಸೌಥಿ 53ಕ್ಕೆ1, ನೀಲ್‌ ವಾಗ್ನರ್‌ 52ಕ್ಕೆ2, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 24ಕ್ಕೆ1).

ಅಲೀಂ ದಾರ್ ದಾಖಲೆ

ಪಾಕಿಸ್ತಾನದ ಅಂಪೈರ್ ಅಲೀಂ ದಾರ್ ಅವರು ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯದಲ್ಲಿ ಕಾರ್ಯನಿ ರ್ವಹಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಇದು ಅವರ 129ನೇ ಪಂದ್ಯ. ಈ ಮೂಲಕ ಅವರು ಹಿರಿಯ ಅಂಪೈರ್, ಜಮೈಕಾದ ಸ್ಟೀವ್‌ ಬಕ್ನರ್ ದಾಖಲೆಯನ್ನು ಮೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.