ADVERTISEMENT

ಮೆಕ್ಸಿಕನ್ ಟೆನಿಸ್: ಮೆಡ್ವೆಡೆವ್, ನಡಾಲ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 16:01 IST
Last Updated 24 ಫೆಬ್ರುವರಿ 2022, 16:01 IST
ಡೆನಿಯಲ್ ಮೆಡ್ವೆಡೆವ್ 
ಡೆನಿಯಲ್ ಮೆಡ್ವೆಡೆವ್    

ಅಕಾಪಲ್ಕೊ, ಮೆಕ್ಸಿಕೊ (ಎಪಿ): ರಷ್ಯಾದ ಡೆನಿಯಲ್ ಮೆಡ್ವೆಡೆವ್ ಮತ್ತು ಸ್ಪೇನ್‌ನ ರಫೆಲ್ ನಡಾಲ್ ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದರು.

ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಮೆಡ್ವೆಡೆವ್ ಬುಧವಾರ ಎರಡನೇ ಸುತ್ತಿನಲ್ಲಿ 6–1,6–2ರಿಂದ ಪ್ಯಾಬ್ಲೊ ಅ್ಯಂಡುಜರ್ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ನಡಾಲ್ 6–0, 6–3ರಿಂದ ಸ್ಟೀಫನ್ ಕೊಜ್ಲೋವ್ ವಿರುದ್ಧ ಜಯಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಮೆಡ್ವೆಡೆವ್ ಯೊಶಿಹಿಟೊ ನಿಶಿಯೊಕಾ ವಿರುದ್ಧ ಜಯಿಸಿದರೆ ಹಾಗೂ ನಡಾಲ್ ಅವರು ಟಾಮಿ ಪಾಲ್ ವಿರುದ್ಧ ಗೆದ್ದರೆ ಸೆಮಿಫೈನಲ್‌ನಲ್ಲಿ ಇಬ್ಬರೂ ಮುಖಾಮುಖಿಯಾಗುವರು.

ADVERTISEMENT

ಹೋದ ತಿಂಗಳು ನಡಾಲ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು. 21ನೇ ಗ್ರ್ಯಾನ್‌ಸ್ಲಾಮ್ ಜಯಿಸಿದ ದಾಖಲೆ ಬರೆದಿದ್ದರು.

ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಮೆಡ್ವೆಡೆವ್ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರೆ ಅಗ್ರಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ಅವರನ್ನು ಹಿಂದಿಕ್ಕುವ ಸಾಧ್ಯತೆ ನಿಚ್ಚಳವಾಗಿದೆ.

ಜ್ವೆರೆವ್ ವಜಾ

ಹಾಲಿ ಚಾಂಪಿಯನ್ ಅಲೆಕ್ಸಾಂಡರ್‌ ಜ್ವೆರೆವ್ ಅವರನ್ನು ಅನುಚಿತ ವರ್ತನೆ ತೋರಿದ ಕಾರಣಕ್ಕೆ ಟೂರ್ನಿಯಂದಲೇ ವಜಾಗೊಳಿಸಲಾಯಿತು.

ಡಬಲ್ಸ್‌ ಪಂದ್ಯದಲ್ಲಿ ಸೋತ ನಂತರ ಜ್ವೆರೆವ್ ತಮ್ಮ ರೆಕೆಟ್‌ ಅನ್ನು ಚೇರ್‌ ಅಂಪೈರ್‌ಗೆ ಬೀಸಿದ್ದರು. ಇದರಿಂದಾಗಿ ಅವರ ಮೇಲೆ ಕ್ರಮಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.