ADVERTISEMENT

Australia vs England | ಆ್ಯಷಸ್ ಟೆಸ್ಟ್: ಸ್ಟಾರ್ಕ್ ಮಿಂಚಿನ ಬ್ಯಾಟಿಂಗ್

ಏಜೆನ್ಸೀಸ್
Published 6 ಡಿಸೆಂಬರ್ 2025, 19:16 IST
Last Updated 6 ಡಿಸೆಂಬರ್ 2025, 19:16 IST
ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 
ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್    

ಬ್ರಿಸ್ಬೇನ್: ಇಂಗ್ಲೆಂಡ್ ತಂಡವನ್ನು ತಮ್ಮ ಬೌಲಿಂಗ್ ಮೂಲಕ ಕಾಡಿದ್ದ ಮಿಚೆಲ್ ಸ್ಟಾರ್ಕ್‌ನಲ್ಲಿ ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸಿದರು. 

ಗ್ಯಾಬಾದಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ (ಹಗಲು ರಾತ್ರಿ) ಸ್ಟಾರ್ಕ್ ಅವರ ಅಮೋಘ ಅರ್ಧಶತಕ (77; 141ಎ, 4X13) ಗಳಿಸಿದರು. ಅದರಿಂದಾಗಿ ಆಸ್ಟ್ರೇಲಿಯಾ ತಂಡವು 117.3 ಓವರ್‌ಗಳಲ್ಲಿ 511 ರನ್ ಗಳಿಸಿತು. 177 ರನ್‌ಗಳ ಮುನ್ನಡೆ ಸಾಧಿಸಿತು. 

ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಶನಿವಾರ ದಿನದಾಟದ ಅಂತ್ಯಕ್ಕೆ 35 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 134 ರನ್ ಗಳಿಸಿತು. ಬೆನ್ ಸ್ಟೋಕ್ಸ್ (ಬ್ಯಾಟಿಂಗ್ 4) ಮತ್ತು ವಿಲ್ ಜ್ಯಾಕ್ಸ್ (ಬ್ಯಾಟಿಂಗ್ 4) ಕ್ರೀಸ್‌ನಲ್ಲಿದ್ದಾರೆ. 

ADVERTISEMENT

ಇಲ್ಲಿಯೂ ಸ್ಟಾರ್ಕ್ (48ಕ್ಕೆ2) ಅವರ ಬೌಲಿಂಗ್ ಪರಿಣಾಮಕಾರಿಯಾಗಿತ್ತು. ಅವರಿಗೆ ಸ್ಕಾಟ್ ಬೋಲ್ಯಾಂಡ್ (33ಕ್ಕೆ2) ಮತ್ತು ಮಿಚೆಲ್ ನೆಸೆರ್ (27ಕ್ಕೆ2) ಕೂಡ ಇಂಗ್ಲೆಂಡ್‌ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಇಂಗ್ಲೆಂಡ್: 76.2 ಓವರ್‌ಗಲಲ್ಲಿ 334. ಆಸ್ಟ್ರೇಲಿಯಾ: 117.3 ಓವರ್‌ಗಳಲ್ಲಿ 511 (ಮಿಚೆಲ್ ಸ್ಟಾರ್ಕ್ 77, ಸ್ಕಾಟ್ ಬೊಲ್ಯಾಂಡ್ ಔಟಾಗದೇ 21, ಬ್ರೆಂಡನ್ ಡಾಗೆಟ್ 13, ಬ್ರೈಡನ್ ಕಾರ್ಸ್ 152ಕ್ಕೆ4, ಬೆನ್ ಸ್ಟೋಕ್ಸ್ 113ಕ್ಕೆ3) ಎರಡನೇ ಇನಿಂಗ್ಸ್: ಇಂಗ್ಲೆಂಡ್: 35 ಓವರ್‌ಗಳಲ್ಲಿ 6ಕ್ಕೆ134 (ಜ್ಯಾಕ್ ಕ್ರಾಲಿ 44, ಒಲಿ ಪೋಪ್ 26, ಬೆನ್ ಡಕೆಟ್ 15, ಜೋ ರೂಟ್ 15, ಹ್ಯಾರಿ ಬ್ರೂಕ್ 15, ಮಿಚೆಲ್ ಸ್ಟಾರ್ಕ್ 48ಕ್ಕೆ2, ಮಿಚೆಲ್ ನೆಸರ್ 27ಕ್ಕೆ2, ಸ್ಕಾಟ್ ಬೊಲ್ಯಾಂಡ್ 33ಕ್ಕೆ2) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.