ADVERTISEMENT

ಎಂಪಿಸಿ ಅಧ್ಯಕ್ಷರಾಗಿ ಮಹಾನಆರ್ಯಮನ್ ಸಿಂಧಿಯಾ

ಪಿಟಿಐ
Published 1 ಸೆಪ್ಟೆಂಬರ್ 2025, 13:56 IST
Last Updated 1 ಸೆಪ್ಟೆಂಬರ್ 2025, 13:56 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಇಂದೋರ್: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರ ಪುತ್ರ ಮತ್ತು ಗ್ವಾಲಿಯರ್ ಡಿವಿಷನ್ ಕ್ರಿಕೆಟ್‌ ಸಂಸ್ಥೆ ಉಪಾಧ್ಯಕ್ಷ ಮಹಾನಆರ್ಯಮನ್ ಸಿಂಧಿಯಾ ಅವರು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಗ್ವಾಲಿಯರ್‌ನ ರಾಜವಂಶಸ್ಥರಾದ 29 ವರ್ಷ ವಯಸ್ಸಿನ ಮಹಾನಆರ್ಯಮನ್ ಸಿಂಧಿಯಾ ಈ ಸ್ಥಾನಕ್ಕೇರಿದ ಅತಿ ಕಿರಿಯವರು ಹಾಗೂ ರಾಜವಂಶದ ಮೂರನೇ ತಲೆಮಾರಿನವರು.

ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು ಎಂದು ಎಂಪಿಸಿಎ ಮುಖ್ಯ ಆಡಳಿತಾಧಿಕಾರಿ ರೋಹಿತ್ ಪಂಡಿತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.