ADVERTISEMENT

ಭಾರತ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕತ್ವಕ್ಕೆ ಎಂಪಿಎಲ್

ಪಿಟಿಐ
Published 2 ನವೆಂಬರ್ 2020, 11:44 IST
Last Updated 2 ನವೆಂಬರ್ 2020, 11:44 IST
ಭಾರತ ಕ್ರಿಕೆಟ್ ತಂಡ –ಎಎಫ್‌ಪಿ ಚಿತ್ರ
ಭಾರತ ಕ್ರಿಕೆಟ್ ತಂಡ –ಎಎಫ್‌ಪಿ ಚಿತ್ರ   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಕಿಟ್ ಅನ್ನು ಇನ್ನು ಮೂರು ವರ್ಷ ಎಂಪಿಎಲ್ ಸ್ಪೋರ್ಟ್ಸ್ ಅಪಾರೆಲ್ಸ್ ಆ್ಯಂಡ್ ಆ್ಯಕ್ಸಸರೀಸ್ ಕಂಪನಿ ಪ್ರಾಯೋಜಿಸಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಸಂಬಂಧ ಸೋಮವಾರ ಒಪ್ಪಂದ ಮಾಡಿಕೊಂಡಿದೆ ಎಂದು ಮಂಡಳಿಯ ಅಪೆಕ್ಸ್ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಪುರುಷರ, ಮಹಿಳೆಯರ, ‘ಎ‘ ತಂಡದ ಮತ್ತು 19 ವರ್ಷದೊಳಗಿನವರ ತಂಡದ ಕಿಟ್‌ಗೂ ಅದೇ ಕಂಪನಿ ಪ್ರಾಯೋಜಕತ್ವ ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ.

‘ಈ ಹಿಂದೆ ಪ್ರಾಯೋಜಕತ್ವ ವಹಿಸಿದ್ದ ನೈಕಿ ಕಂಪನಿ ಪ್ರತಿ ಪಂದ್ಯಕ್ಕೆ ₹ 88 ಲಕ್ಷ ವ್ಯಯಿಸುತ್ತಿತ್ತು. ಆದರೆ ಎಂಪಿಎಲ್ ಅಷ್ಟು ಮೊತ್ತ ಪಾವತಿಸಲು ಸಿದ್ಧವಿಲ್ಲ. ಅದು ಪ್ರತಿ ಪಂದ್ಯಕ್ಕೆ ₹ 65 ಲಕ್ಷ ವ್ಯಯಿಸಲಿದೆ’ ಎಂದು ಈ ಸದಸ್ಯರು ತಿಳಿಸಿದ್ದಾರೆ. ಕಂಪನಿಯ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯದ ಶೇಕಡಾ 10ರಷ್ಟು ಬಿಸಿಸಿಐಗೆ ಸಂಭಾವನೆ ರೂಪದಲ್ಲಿ ಸಿಗಲಿದೆ.

ಎಂಪಿಎಲ್ ಸದ್ಯ ಐಪಿಎಲ್‌ನಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಜೊತೆ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಟಿಕೆಆರ್‌ ಜೊತೆ, ಐರ್ಲೆಂಡ್ ಹಾಗೂ ಯುಎಇ ಕ್ರಿಕೆಟ್ ಮಂಡಳಿಗಳ ಜೊತೆ ಒಪ್ಪಂದದಲ್ಲಿ ಏರ್ಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.