ADVERTISEMENT

ಅಭಿಮಾನಿ ಪಾದಕ್ಕೆರಗಿದಾಗ ರಾಷ್ಟ್ರಧ್ವಜ ನೆಲ ಸ್ಪರ್ಶಿಸದಂತೆ ತಡೆದ ದೋನಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 19:40 IST
Last Updated 10 ಫೆಬ್ರುವರಿ 2019, 19:40 IST
   

ಹ್ಯಾಮಿಲ್ಟನ್: ಸೆಡನ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಭಾರತ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗು ಅಂತಿಮ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದ ವೇಳೆ ಭದ್ರತೆಯನ್ನು ಭೇದಿಸಿ ದೋನಿ ಅಭಿಮಾನಿಯೊಬ್ಬರು ಕ್ರಿಕೆಟ್ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.

ಕೈಯಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ಮೈದಾನದೊಳಗೆ ಓಡುತ್ತಾ ಬಂದ ಅಭಿಮಾನಿ ಕ್ರೀಸ್‍ನಲ್ಲಿದ್ದಮಹೇಂದ್ರ ಸಿಂಗ್ದೋನಿ ಪಾದಕ್ಕೆ ನಮಸ್ಕರಿಸಿದ್ದಾರೆ.ಆತ ಪಾದಕ್ಕೆ ನಮಸ್ಕರಿಸುವ ಹೊತ್ತಲ್ಲಿ ರಾಷ್ಟ್ರಧ್ವಜ ನೆಲ ಸ್ಪರ್ಶಿಸದಂತೆ ದೋನಿ ಆ ಧ್ವಜವನ್ನು ತಮ್ಮ ಕೈಗೆತ್ತಿಕೊಂಡಿದ್ದಾರೆ.

ಅಭಿಮಾನಿಯೊಂದಿಗೆ ದೋನಿಯ ಸಂಯಮದ ವರ್ತನೆಯ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೋನಿಯ ಸಮಯಪ್ರಜ್ಞೆ ಹಾಗೂ ದೊಡ್ಡ ಗುಣದ ಬಗ್ಗೆ ಜನರು ಶ್ಲಾಘಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.