ಸಿಎಸ್‌ಕೆ ಟ್ವಿಟರ್ ಖಾತೆಯ ಚಿತ್ರ
ಚೆನ್ನೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯ ತಯಾರಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಲುಪಿದ್ದಾರೆ.
ಕಳೆದ ವರ್ಷ ಐದನೇ ಬಾರಿಗೆ ಕಪ್ ಗೆದ್ದ ಹಾಲಿ ಚಾಂಪಿಯಮ್ ಚೆನ್ನೈ ತಂಡದ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಧೋನಿ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, "#THA7A Dharisanam!" ಎಂದು ಹ್ಯಾಶ್‌ಟ್ಯಾಗ್ ನೀಡಲಾಗಿದೆ.
ಇದು ಧೋನಿ ಅವರ ಕೊನೆಯ ಐಪಿಎಲ್ ಪಂದ್ಯಾವಳಿ ಆಗಿರಲಿದೆ ಎಂಬ ವದಂತಿಗಳು ಹಬ್ಬಿವೆ.
ಸಿಎಸ್‌ಕೆಯ ಮೊದಲ ಬ್ಯಾಚ್ ಶುಕ್ರವಾರವೇ ಚೆನ್ನೈ ತಲುಪಿದ್ದು, ಶನಿವಾರದಿಂದ ತರಬೇತಿ ಶಿಬಿರ ಆರಂಭವಾಗಿದೆ.
ದೀಪಕ್ ಚಹಾರ್, ರುತುರಾಜ್ ಗಾಯಕ್ವಾಡ್, ಸಿಮರ್‌ಜಿತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಮುಕೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಅಜಯ್ ಮಂಡಲ್, ಶೇಖ್ ರಶೀದ್ ಮತ್ತು ನಿಶಾಂತ್ ಸಿಂದು ತರಬೇತಿ ಶಿಬಿರ ಸೇರಿದ್ದಾರೆ.
ಮಾರ್ಚ್ 22ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮೊದಲ ಪಂದ್ಯವನ್ನು ಆಡುವ ಮೂಲಕ ಚೆನ್ನೈ ತನ್ನ ಐಪಿಎಲ್ ಅಭಿಯಾನವನ್ನು ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.