ADVERTISEMENT

ಐಪಿಎಲ್ | ಅಭ್ಯಾಸಕ್ಕೆ ಇಳಿದ ಮಹೇಂದ್ರ ಸಿಂಗ್ ಧೋನಿ

ಪಿಟಿಐ
Published 2 ಮಾರ್ಚ್ 2020, 16:40 IST
Last Updated 2 ಮಾರ್ಚ್ 2020, 16:40 IST
ಮಹೇಂದ್ರ ಸಿಂಗ್ ಧೋನಿ –ಪಿಟಿಐ ಚಿತ್ರ
ಮಹೇಂದ್ರ ಸಿಂಗ್ ಧೋನಿ –ಪಿಟಿಐ ಚಿತ್ರ   

ಚೆನ್ನೈ: ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ನಂತರ ಭಾರತ ತಂಡದಿಂದ ಮತ್ತು ಪ್ರಮುಖ ಟೂರ್ನಿಗಳಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಸೋಮವಾರ ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಅಭ್ಯಾಸದಲ್ಲಿ ಪಾಲ್ಗೊಂಡ ಅವರು ಅಭಿಮಾನಿಗಳನ್ನು ರಂಜಿಸಿದರು. ಅವರಿಗೆ ಅದ್ದೂರಿ ಸ್ವಾಗತವೂ ದೊರೆಯಿತು.

ವಿಶ್ವಕಪ್ ಟೂರ್ನಿಯ ನಂತರ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಅನುಮಾನಗಳು ಎದ್ದಿದ್ದವು. ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.

ADVERTISEMENT

ಸೋಮವಾರ ಅಂಗಣಕ್ಕೆ ಇಳಿದ ಕೂಡಲೇ ಅಭಿಮಾನಿಗಳು ‘ಧೋನಿ...ಧೋನಿ...’ ಎಂದು ಕೂಗಿದರು. ಜಾಗಿಂಗ್ ಮತ್ತು ಸ್ಟ್ರೆಚಿಂಗ್ ಮಾಡಿದ ನಂತರ ಬ್ಯಾಟ್ ಕೈಗೆತ್ತಿಕೊಂಡ ಧೋನಿ ಕೆಲವು ಭರ್ಜರಿ ಹೊಡೆತಗಳ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದರು. ಅಂಬಟರಿ ರಾಯುಡು, ಮುರಳಿ ವಿಜಯ್‌, ಪಿಯೂಷ್‌ ಚಾವ್ಲಾ, ಕರಣ್ ಶರ್ಮಾ ಕೂಡ ನೆಟ್ಸ್‌ಗೆ ಇಳಿದರು. ತಂಡದ ಪೂರ್ಣ ಪ್ರಮಾಣದ ಅಭ್ಯಾಸ ಮಾರ್ಚ್ 19ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.