ADVERTISEMENT

IPL 2023: ಬೆನ್ನು ನೋವು, ಜಸ್‌ಪ್ರೀತ್‌ ಬೂಮ್ರಾ ಬದಲು ಸಂದೀಪ್‌ಗೆ‌ ಸ್ಥಾನ

ಪಿಟಿಐ
Published 31 ಮಾರ್ಚ್ 2023, 14:17 IST
Last Updated 31 ಮಾರ್ಚ್ 2023, 14:17 IST
ಜಸ್‌ಪ್ರೀತ್‌ ಬೂಮ್ರಾ
ಜಸ್‌ಪ್ರೀತ್‌ ಬೂಮ್ರಾ   

ಮುಂಬೈ: ಮುಂಬೈ ಇಂಡಿಯನ್ಸ್‌ ತಂಡವು ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಬದಲು ಸಂದೀಪ್‌ ವಾರಿಯರ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಬೆನ್ನು ನೋವಿನಿಂದ ಚೇತರಿಸಿಕೊಳ್ಳದ ಕಾರಣ ಬೂಮ್ರಾ ಅವರು ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ.

‘ಬೂಮ್ರಾ ಅವರ ಬದಲಿ ಆಟಗಾರನಾಗಿ ಬಲಗೈ ವೇಗದ ಬೌಲರ್‌ ಸಂದೀಪ್‌ ವಾರಿಯರ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸಂದೀಪ್‌ ದೇಸಿ ಕ್ರಿಕೆಟ್‌ನಲ್ಲಿ 69 ಟಿ20 ಸೇರಿದಂತೆ 200ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದಾರೆ. 362 ವಿಕೆಟ್‌ಗಳನ್ನು ಗಳಿಸಿದ್ದಾರೆ’ ಎಂದು ಮುಂಬೈ ಇಂಡಿಯನ್ಸ್ ಪ್ರಕಟಣೆ ತಿಳಿಸಿದೆ.

ADVERTISEMENT

‘ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.