ADVERTISEMENT

ರಾಷ್ಟ್ರೀಯ ಟಿ20 ಲೀಗ್‌: ಆಟಗಾರರ ಸಂಭಾವನೆ ಪರಿಷ್ಕರಿಸಿದ ಪಿಸಿಬಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
<div class="paragraphs"><p>ಪಿಸಿಬಿ</p></div>

ಪಿಸಿಬಿ

   

ಕರಾಚಿ: ಪಂದ್ಯ ಸಂಭಾವನೆಯ ಕಡಿತಗೊಳಿಸುವ ನಿರ್ಧಾರಕ್ಕೆ ತೀವ್ರ ವಿರೋಧ ಎದುರಾದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಗುರುವಾರ ರಾಷ್ಟ್ರೀಯ ಟಿ20 ಚಾಂಪಿಯನ್‌ಷಿಪ್ಸ್‌ನಲ್ಲಿ ಆಡುವ ಆಟಗಾರರ ಸಂಭಾವನೆಯನ್ನು ಏರಿಕೆ ಮಾಡಿದೆ.

ಮೂರು ದಿನಗಳ ಹಿಂದೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಆಟಗಾರರ ಸಂಭಾವನೆಯನ್ನು ಪ್ರತಿ ಪಂದ್ಯಕ್ಕೆ ಒಂದು ಲಕ್ಷ ರೂಪಾಯಿಗಳಿಂದ 10,000 ರೂ.ಗಳಿಗೆ, ಮೀಸಲು ಆಟಗಾರರ ಸಂಭಾವನೆಯನ್ನು 50 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಇಳಿಸಿತ್ತು. ಆದರೆ ಈ ನಿರ್ಧಾರ ಮರುಪರಿಶೀಲಿಸುವಂತೆ ಅಧ್ಯಕ್ಷ ಮೊಹ್ಸಿನ್ ನಕ್ವಿ ಆದೇಶ ನೀಡಿದ್ದರು.

ADVERTISEMENT

ವ್ಯಾಪಕ ಟೀಕೆಗಳು ಮತ್ತು ಆಕ್ರೋಶ ಎದುರಾದ ಕಾರಣ ಪಿಸಿಬಿ ಈಗ ಸಂಭಾವನನೆಯನ್ನು ಪ್ರತಿ ಪಂದ್ಯಕ್ಕೆ 40000 ರೂ.ಗಳಿಗೆ ಏರಿಸಿದೆ. ಮೀಸಲು ಆಟಗಾರರ ಸಂಭಾವನೆಯನ್ನು 20000 ರೂ.ಗಳಿಗೆ ಏರಿಸಲಾಗಿದೆ.

ರಾಷ್ಟ್ರೀಯ 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ಅನ್ನು ಆರಂಭವಾದ ಒಂದೇ ದಿನದ ನಂತರ ಮಂಡಳಿಯ ದಿಢೀರನೇ ಸ್ಥಗಿತಗೊಳಿಸಿದ ಕಾರಣ ಈ ಋತುವಿನಲ್ಲಿ ಪಾಕಿಸ್ತಾನ ದೇಶಿ ಕ್ರಿಕೆಟ್‌ನ ವೇಳಾಪಟ್ಟಿ ಮತ್ತು ಸ್ವರೂಪದ ಬಗ್ಗೆ ಚರ್ಚೆಗಳಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.