ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸೀತಾಂಶು ಕೋಟಕ್ ಅವರನ್ನು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
ಸೌರಾಷ್ಟ್ರ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಆಗಿದ್ದ ಸೀತಾಂಶು ದೀರ್ಘ ಸಮಯದಿಂದ ಎನ್‌ಸಿಎನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 52 ವರ್ಷದ ಕೋಟಕ್ ಅವರನ್ನು ನೇಮಕ ಮಾಡಿರುವುದರಿಂದ, ಪ್ರಸ್ತುತ ಕೋಚ್ ಆಗಿರುವ ಅಭಿಷೇಕ್ ನಾಯರ್ ಅವರನ್ನು ಮುಂದುವರಿಸುವ ಬಗ್ಗೆ ಅನುಮಾನಗಳು ಮೂಡಿವೆ.
ಈಚೆಗೆ ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿ ಸೋತ ನಂತರದ ಬೆಳವಣಿಗೆಯಲ್ಲಿ ಅವಿನಾಶ್ ಅವರ ಕಾರ್ಯಕ್ಷಮತೆ ಕುರಿತು ಅವಲೋಕನ ನಡೆಸಲಾಗಿತ್ತು.
ಕೋಟಕ್ ಅವರು ಭಾರತದ ಸೀನಿಯರ್ ಮತ್ತು ಎ ತಂಡಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸಿದ್ದಾರೆ.
‘ಭಾರತ ತಂಡದ ಆಟಗಾರರಿಗೆ ಅಭಿಷೇಕ್ ನಾಯರ್ ಅವರ ಅನುಭವ ಮತ್ತು ಮಾರ್ಗದರ್ಶನ ನೆರವಾಗುತ್ತಿಲ್ಲ ಎನ್ನುವುದು ಸ್ಪಷ್ಟ. ಕೋಟಕ್ ಅವರು ಪರಿತಣ ಬ್ಯಾಟಿಂಗ್ ಕೋಚ್ ಆಗಿ ಬಹಳ ಕಾಲದಿಂದ ಕಾರ್ಯನಿರ್ವಹಿಸಿದ್ದಾರೆ. ಆಟಗಾರರಿಗೂ ಅವರ ಮೇಲೆ ವಿಶ್ವಾಸವಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಟಕ್ ಅವರು ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು. ಎಡಗೈ ಬ್ಯಾಟರ್ ಕೋಟಕ್ ಅವರು ಪ್ರಥಮ ದರ್ಜೆಯಲ್ಲಿ 8 ಸಾವಿರ ರನ್ ಪೇರಿಸಿದ್ದಾರೆ. ಅದರಲ್ಲಿ 15 ಶತಕಗಳಿವೆ. ಒಟ್ಟು 130 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ. ಅವರು ತಮ್ಮ ಕವರ್ ಡ್ರೈವ್ ಮತ್ತು ಫ್ಲಿಕ್ ಹೊಡೆತಗಳ ಮೂಲಕ ಚಿರಪರಿಚಿತರಾಗಿದ್ದರು.
ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಐದು ಟಿ20 ಪಂದ್ಯಗಳ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗಳಲ್ಲಿ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.