ADVERTISEMENT

IND vs NZ | ಎರಡನೇ ಟೆಸ್ಟ್‌ನಲ್ಲೂ ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 4:52 IST
Last Updated 2 ಮಾರ್ಚ್ 2020, 4:52 IST
   

ಕ್ರೈಸ್ಟ್‌ ಚರ್ಚ್‌: ಬ್ಯಾಟ್ಸ್‌ಮನ್‌ಗಳ ಸತತ ವೈಫಲ್ಯದಿಂದ ಕಂಗೆಟ್ಟಿರುವ ಟೀಂ ಇಂಡಿಯಾ ನ್ಯೂಜಿಲೆಂಡ್‌ ಎದುರಿನ ಎರಡನೇ ಟೆಸ್ಟ್‌ ಅನ್ನೂ ಕೈಚೆಲ್ಲಿದೆ. ಸರಣಿಯ ಎರಡೂ ಪಂದ್ಯಗಳನ್ನೂ ಗೆದ್ದ ನ್ಯೂಜಿಲೆಂಡ್‌ ಕ್ಲೀನ್ ಸ್ವೀಪ್‌ ಮಾಡಿದೆ.

ಐಸಿಸಿ ಟೆಸ್ಟ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌ನ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ಭಾರತ ಅದಾಗಲೇ ಒಂದು ಪಂದ್ಯದಲ್ಲಿ ಸೋತಿತ್ತು. ಸದ್ಯ ಎರಡನೇ ಪಂದ್ಯವನ್ನೂ ಸೋತು ಸರಣಿಯನ್ನು ನ್ಯೂಜಿಲೆಂಡ್‌ಗೆ ಒಪ್ಪಿಸಿದೆ.

ಶನಿವಾರ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 242 ರನ್‌ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್‌ 235ರನ್‌ಗಳಿಗೆ ಆಲೌಟ್‌ ಆಗಿತ್ತು. ಆದರೆ ಎರಡನೇ ದಿನದಾಟದಲ್ಲಿ ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಭಾರತ ದೊಡ್ಡ ಮಟ್ಟದ ಕುಸಿತ ಕಂಡಿತು. 36 ಓವರ್‌ಗಳಲ್ಲಿ 90 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಭಾರತ ಕೇವಲ 97ರನ್‌ಗಳ ಮುನ್ನಡೆಯಲ್ಲಿತ್ತು.

ADVERTISEMENT

ಸೋಮವಾರ ಮೂರನೇ ದಿನದಾಟದ ವೇಳೆ ಹಿಂದಿನ 97 ರನ್‌ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ 124ರನ್‌ಗಳಿಗೆ ಸರ್ವ ಪತನ ಕಂಡಿತು. 132ರನ್‌ಗಳ ಗುರಿಯನ್ನು ನ್ಯೂಜಿಲೆಂಡ್‌ 36 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿತು.

ಪಂದ್ಯದಲ್ಲಿ ಎರಡೂ ತಂಡಗಳೂ ಬೌಲಿಂಗ್‌ನಲ್ಲಿ ಪಾರಮ್ಯ ಮೆರೆದವು. ಆದರೆ, ಭಾರತದ ಕಡೆಯ ಬ್ಯಾಟ್ಸ್‌ಮನ್‌ಗಳು ತೀವ್ರ ನಿರಾಶಾದಾಯಕ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.