ADVERTISEMENT

ಕೆರಿಬಿಯನ್‌ ಪ್ರವಾಸಕ್ಕೆ ಮಹಿಳಾ ತಂಡದ ಆಯ್ಕ

ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿರುವ ತಂಡ ಉಳಿಸಿಕೊಂಡ ಆಯ್ಕೆಗಾರರು

ಪಿಟಿಐ
Published 27 ಸೆಪ್ಟೆಂಬರ್ 2019, 17:53 IST
Last Updated 27 ಸೆಪ್ಟೆಂಬರ್ 2019, 17:53 IST
   

ನವದೆಹಲಿ: ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳುವ ಭಾರತ ಮಹಿಳಾ ತಂಡವನ್ನು ರಾಷ್ಟ್ರೀಯ ಆಯ್ಕೆಗಾರರು ಶುಕ್ರವಾರ ಪ್ರಕಟಿಸಿದ್ದಾರೆ.ಕೆರಿಬಿಯನ್‌ ಪ್ರವಾಸದ ವೇಳೆ ತಂಡವು ಮೂರು ಏಕದಿನ, ಐದು ಟಿ–20 ಪಂದ್ಯಗಳನ್ನು ಆಡಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಬರೋಡಾದಲ್ಲಿ ಅಕ್ಟೋಬರ್‌ 9 ರಿಂದ ನಡೆಯಲಿರುವ ಏಕದಿನ ಸರಣಿಗೆ ಆಯ್ಕೆಯಾದ ತಂಡವೇ ವೆಸ್ಟ್‌ ಇಂಡೀಸ್‌ಗೂ ಹೋಗಲಿದೆ. ಮೊದಲ ಪಂದ್ಯ ನವೆಂಬರ್‌ 1ರಂದು ಆ್ಯಂಟೀಗಾದಲ್ಲಿ ನಡೆಯಲಿದೆ. 15 ಮಂದಿಯ ತಂಡದ ಜೊತೆ ಸುಷ್ಮಾ ವರ್ಮಾ ಅವರಿಗೂ ಅವಕಾಶ ನೀಡಲಾಗಿದೆ.

ಟಿ–20 ಸರಣಿಗೂ, ದಕ್ಷಿಣ ಆಫ್ರಿಕಾ ವಿರುದ್ಧ ಹಾಲಿ ಆಡುತ್ತಿರುವ ತಂಡವನ್ನೇ ಉಳಿಸಕೊಳ್ಳಲಾಗಿದೆ. ಸರಣಿಯ ಮೊದಲ ಪಂದ್ಯ ನವೆಂಬರ್‌ 9ರಂದು ಸೇಂಟ್‌ ಲೂಸಿಯಾದಲ್ಲಿ ನಡೆಯಲಿದೆ. 15 ವರ್ಷದ ಶೆಫಾಲಿ ವರ್ಮಾ ಸ್ಥಾನ ಉಳಿಸಿಕೊಂಡಿದ್ದಾರೆ.‌

ADVERTISEMENT

ಏಕದಿನ ತಂಡ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್‌ ಕೌರ್‌ (ಉಪನಾಯಕಿ), ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಪೂನಂ ರಾವತ್‌, ಡಿ.ಹೇಮಲತಾ, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಮಾನಸಿ ಜೋಶಿ, ಪೂನಂ ಯಾದವ್‌, ಏಕ್ತಾ ಬಿಷ್ತ್, ರಾಜೇಶ್ವರಿ ಗಾಯಕವಾಡ್‌, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಪ್ರಿಯಾ ಪುನಿಯಾ, ಸುಷ್ಮಾ ವರ್ಮಾ.

ಟಿ–20 ತಂಡ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ),ಜೆಮಿಮಾ ರಾಡ್ರಿಗಸ್‌, ಶೆಫಾಲಿ ವರ್ಮಾ, ಹರ್ಲೀನ್ ಡಿಯೋಲ್‌, ದೀಪ್ತಿ ಶರ್ಮಾ, ತಾನಿಯಾ ಭಟಿಯಾ, ಪೂನಂ ಯಾದವ್‌, ರಾಧಾ ಯಾದವ್‌, ವೇದಾ ಕೃಷ್ಣಮೂರ್ತಿ, ಅನುಜಾ ಪಾಟೀಲ್, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಮಾನಸಿ ಜೋಶಿ, ಆರುಂಧತಿ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.