ADVERTISEMENT

ಏಷ್ಯಾ ಕಪ್ ಕ್ರಿಕೆಟ್; ಬಾಬರ್, ರಿಜ್ವಾನ್‌ಗೆ ಕೊಕ್

ಪಿಟಿಐ
Published 17 ಆಗಸ್ಟ್ 2025, 16:30 IST
Last Updated 17 ಆಗಸ್ಟ್ 2025, 16:30 IST
ಬಾಬರ್ ಆಜಂ
ಬಾಬರ್ ಆಜಂ   

ಲಾಹೋರ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಪಾಕಿಸ್ತಾನ ತಂಡದಿಂದ ಅನುಭವಿ ಆಟಗಾರರಾದ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರಿಗೆ ಕೊಕ್ ನೀಡಲಾಗಿದೆ. 

ಏಷ್ಯಾ ಕಪ್ ಮತ್ತು ಇದೇ ತಿಂಗಳು ಯುಎಇಯಲ್ಲಿ ನಡೆಯುವ ತ್ರಿಕೋನ ಸರಣಿಗೆ ಭಾನುವಾರ ತಂಡಗಳನ್ನು ಪ್ರಕಟಿಸಲಾಯಿತು. ಅದರಲ್ಲಿ ಬಾಬರ್ ಮತ್ತು ರಿಜ್ವಾನ್ ಅವರಿಬ್ಬರ ಹೆಸರುಗಳಿಲ್ಲ. ಸಲ್ಮಾನ್ ಅಲಿ ಆಘಾ ತಂಡದ ನಾಯಕತ್ವ ವಹಿಸುವರು. 

‘ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಈ ತಂಡಕ್ಕೆ ಇದೆ. ವಿಶ್ವದ ಕ್ರಿಕೆಟ್ ಕ್ಷೇತ್ರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವೇ ಯಾವಾಗಲೂ ಬೃಹತ್ ಸ್ಪರ್ಧೆಯಾಗಿದೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯ ಮುಖ್ಯಸ್ಥ ಅಕೀಬ್ ಜಾವೇದ್ ಹೇಳಿದ್ದಾರೆ. 

ADVERTISEMENT

ತಂಡ: ಸಲ್ಮಾನ್ ಅಲಿ ಆಘಾ (ನಾಯಕ), ಅಬ್ರಾರ್ ಅಹಮದ್, ಫಹೀಮ್ ಅಶ್ರಫ್, ಫಕ್ರ್ ಜಮಾನ್, ಹ್ಯಾರಿಸ್ ರವೂಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್‌ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ಸಾಹಿಬ್‌ಝಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ, ಸೂಫಿಯಾನ್ ಮೊಕಿಮ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.