ADVERTISEMENT

ಕೊಹ್ಲಿ–ರೋಹಿತ್ ಇಬ್ಬರೂ ಅಲ್ಲ: ದಿಶಾ ಪಟಾನಿ ಪ್ರಕಾರ ಬೂಮ್ರಾ ‘ಮ್ಯಾಚ್ ವಿನ್ನರ್’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 14:25 IST
Last Updated 4 ಫೆಬ್ರುವರಿ 2020, 14:25 IST
   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಪ್ರತಿಭಾವಂತ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಬಾಲಿವುಡ್‌ ನಟಿ ದಿಶಾ ಪಟಾನಿ ಮ್ಯಾಚ್‌ ವಿನ್ನರ್‌ ಎಂದು ಕರೆದಿದ್ದಾರೆ.

ಫೆಬ್ರವರಿ 7ರಂದುಬಿಡುಗಡೆಗೆ ಸಿದ್ಧವಾಗಿರುವ ‘ಮಲಂಗ್’ ಚಿತ್ರದ ಪ್ರಚಾರ ನಿಮಿತ್ತ ಸ್ಟಾರ್‌ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿಶಾ, ಈ ರೀತಿ ಹೇಳಿದ್ದಾರೆ. ‘ನಾನು ‘ಮ್ಯಾಚ್‌ ವಿನ್ನರ್‌’ ಅನ್ನು ಆಯ್ಕೆ ಮಾಡುವುದಾದರೆ, ಅದು ಜಸ್‌ಪ್ರೀತ್ ಬೂಮ್ರಾ ಆಗಿರುತ್ತಾರೆ. ಭಾರತ ತಂಡದಲ್ಲಿರುವ ಅತ್ಯುತ್ತಮ ಆಟಗಾರ ಅವರು. ಬೂಮ್ರಾಫೆಬ್ರವರಿ 2ರಂದು ನ್ಯೂಜಿಲೆಂಡ್ ವಿರುದ್ಧ ನಡೆದಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದು ನಮ್ಮೆಲ್ಲರಿಗೂಹೆಮ್ಮೆಯ ಕ್ಷಣ’ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿತ್ತು. ಈ ಟೂರ್ನಿಯಲ್ಲಿ ಬೂಮ್ರಾ ಆರು ವಿಕೆಟ್‌ ಪಡೆದಿದ್ದರು. ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ಸೂಪರ್‌ ಓವರ್‌ ಎಸೆದಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಅಷ್ಟಾಗಿ ಮಿಂಚದ ಬೂಮ್ರಾ, ಕೊನೆಯ ಪಂದ್ಯದಲ್ಲಿ ಕೇವಲ 12 ರನ್‌ ನೀಡಿ 3 ವಿಕೆಟ್‌ ಉರುಳಿಸಿದ್ದರು.

ADVERTISEMENT

ಕೊಹ್ಲಿ ಎಲ್ಲರ ನಾಯಕ: ಅನಿಲ್‌ ಕಪೂರ್‌
ದಿಶಾ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಟ ಅನಿಲ್ ಕಪೂರ್‌, ‘ಕೊಹ್ಲಿ ಎಲ್ಲರ ನಾಯಕ. ಯಾವುದೇ ಎದುರಾಳಿ ವಿರುದ್ಧ ಅವರು ಹೊಂದಿರುವ ಬದ್ಧತೆಯು ಆಟವನ್ನು ಗೆದ್ದುಕೊಡಬಲ್ಲುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವುನಾಳೆಯಿಂದಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.ಎರಡನೇ ಪಂದ್ಯ ಫೆಬ್ರುವರಿ 8ರಂದು ಆಕ್ಲೆಂಡ್‌ನಲ್ಲಿ ಮತ್ತು ಮೂರನೇ ಪಂದ್ಯ ಫೆಬ್ರುವರಿ 11ರಂದು ಮೌಂಟ್‌ ಮಾಂಗನೂಯಿಯಲ್ಲಿ ನಡೆಯಲಿದೆ.ಟೆಸ್ಟ್ ಪಂದ್ಯಗಳು ಫೆ.21 ಹಾಗೂ ಫೆ.29ರಿಂದ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.