ADVERTISEMENT

ಅಂಕಿತ್, ಯಶ್‌ ಶತಕ ಸಂಭ್ರಮ

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ: ಉತ್ತರ, ಕೇಂದ್ರ ತಂಡಗಳಿಗೆ ಬೃಹತ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 19:22 IST
Last Updated 30 ಆಗಸ್ಟ್ 2025, 19:22 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಶನಿವಾರ ಶತಕ ಗಳಿಸಿದ ಉತ್ತರ ವಲಯ ತಂಡದ ಅಂಕಿತ್ ಕುಮಾರ್ ಮತ್ತು ಯಶ್ ಧುಳ್   –ಪಿಟಿಐ ಚಿತ್ರ
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಶನಿವಾರ ಶತಕ ಗಳಿಸಿದ ಉತ್ತರ ವಲಯ ತಂಡದ ಅಂಕಿತ್ ಕುಮಾರ್ ಮತ್ತು ಯಶ್ ಧುಳ್   –ಪಿಟಿಐ ಚಿತ್ರ   

ಬೆಂಗಳೂರು: ಅಂಕಿತ್ ಕುಮಾರ್ ಮತ್ತು ಯಶ್ ಧುಳ್ ಅವರ ಶತಕಗಳ ಬಲದಿಂದ ಉತ್ತರ ವಲಯ ತಂಡವು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ. 

ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ)ದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರದ ಮುಕ್ತಾಯಕ್ಕೆ ಉತ್ತರ ವಲಯವು 563 ರನ್‌ಗಳ ಮುನ್ನಡೆ ಸಾಧಿಸಿತು. 

ಮೊದಲ ಇನಿಂಗ್ಸ್‌ನಲ್ಲಿ ಉತ್ತರ ವಲಯ ತಂಡವು 405 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಪೂರ್ವ ವಲಯವು 56.1 ಓವರ್‌ಗಳಲ್ಲಿ 230 ರನ್‌ ಮಾತ್ರ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಅಂಕಿತ್ ಕುಮಾರ್ (ಬ್ಯಾಟಿಂಗ್ 168, 264ಎ, 4X16, 6X1) ಮತ್ತು ಯಶ್ (133; 157ಎ, 4X14, 6X3) ಶತಕದ ಬಲದಿಂದ ಉತ್ತರ ವಲಯವು 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 388 ರನ್ ಗಳಿಸಿತು.

ADVERTISEMENT

ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಕೇಂದ್ರ ವಲಯ ತಂಡವು ಈಶಾನ್ಯ ವಲಯದ ವಿರುದ್ಧ 678 ರನ್‌ಗಳ ಬೃಹತ್ ಮುನ್ನಡೆ ಗಳಿಸಿತು. ಕೇಂದ್ರ ವಲಯವು ಮೂರನೇ ದಿನದಾಟದ ಮುಕ್ತಾಯಕ್ಕೆ 80.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 331 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಶುಭಂ ಶರ್ಮಾ ಶತಕ (122; 215ಎ, 4X17) ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ವಲಯ: 93.2 ಓವರ್‌ಗಳಲ್ಲಿ 405. ಪೂರ್ವ ವಲಯ: 56.1 ಓವರ್‌ಗಳಲ್ಲಿ 230. ಎರಡನೇ ಇನಿಂಗ್ಸ್: ಉತ್ತರ ವಲಯ: 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 388 (ಶುಭಂ ಖಜುರಿಯಾ 21, ಅಂಕಿತ್ ಕುಮಾರ್ ಬ್ಯಾಟಿಂಗ್ 168, ಯಶ್ ಧುಳ್ 133, ಆಯುಷ್ ಬಡೋನಿ ಬ್ಯಾಟಿಂಗ್ 56, ಸೂರಜ್ ಸಿಂಧು ಜೈಸ್ವಾಲ್ 37ಕ್ಕೆ1, ರಿಯಾನ್ ಪರಾಗ್ 63ಕ್ಕೆ1) 

ಮೊದಲ ಇನಿಂಗ್ಸ್: ಕೇಂದ್ರ ವಲಯ: 102 ಓವರ್‌ಗಳಲ್ಲಿ 4ಕ್ಕೆ532 ಡಿಕ್ಲೇರ್ಡ್. ಈಶಾನ್ಯ ವಲಯ: 69.3 ಓವರ್‌ಗಳಲ್ಲಿ 185. ಎರಡನೇ ಇನಿಂಗ್ಸ್: ಕೇಂದ್ರ ವಲಯ: 80.3 ಓವರ್‌ಗಳಲ್ಲಿ 7ಕ್ಕೆ331 ಡಿಕ್ಲೇರ್ಡ್ (ಶುಭಂ ಶರ್ಮಾ 122, ರಜತ್ ಪಾಟೀದಾರ್ 66, ಯಶ್ ರಾಥೋಡ್ 78, ದೀಪಕ್ ಚಾಹರ್ ಬ್ಯಾಟಿಂಗ್ 21, ಆಕಾಶ್ ಚೌಧರಿ 44ಕ್ಕೆ2, ಬಿಶ್ವೋಜೀತ್ ಕೊಂಥಾವುಜಮ್ 67ಕ್ಕೆ2) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.