ADVERTISEMENT

ಕ್ರಿಕೆಟ್ ಕೋಚ್ ‘ಬಾಬಿ ಸಾಹೇಬ್’ ನಿಧನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 16:10 IST
Last Updated 3 ಸೆಪ್ಟೆಂಬರ್ 2020, 16:10 IST
ಕ್ರಿಕೆಟ್
ಕ್ರಿಕೆಟ್   

ರಾಜ್‌ಕೋಟ್: ಸೌರಾಷ್ಟ್ರದ ಖ್ಯಾತ ಕ್ರಿಕೆಟ್ ಕೋಚ್ ಅಕ್ಬರ್‌ಖಾನ್ ಬಾಬಿ (80) ನಿಧನರಾದರು.

‘ಬಾಬಿ ಸಾಹೇಬ್’ ಎಂದೇ ಚಿರಪರಿಚಿತರಾಗಿದ್ದ ಅವರು ಕೆಲಕಾಲದಿಂದ ಅಸ್ವಸ್ಥರಾಗಿದ್ದರು. ಬುಧವಾರ ಕೊನೆಯುಸಿರೆಳೆದರು ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯು ತಿಳಿಸಿದೆ.

ಕಳೆದ ನಾಲ್ಕು ದಶಕಗಳಿಂದ ರಾಜ್‌ಕೋಟ್ ಮತ್ತಿತರ ನಗರಗಳಲ್ಲಿ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದರು. ಸೌರಾಷ್ಟ್ರದಿಂದ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ ಧೀರಜ್ ಪರಸಾನಾ, ಉದಯ್ ಜೋಶಿ, ನಿರಂಜನ್ ಮೆಹ್ತಾ, ಮಹೇಂದ್ರ ರಾಜದೇವ್ ಅವರು ಬಾಬಿ ಮಾರ್ಗದರ್ಶನದಲ್ಲಿ ಬೆಳೆದಿದ್ದರು.

ADVERTISEMENT

ಭಾರತ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕೂಡ ಕೆಲ ಸಮಯ ಬಾಬಿ ಅವರಿಂದ ತರಬೇತಿ ಪಡೆದಿದ್ದರು.

‘ಭಾರತದಲ್ಲಿ ಆಸ್ಟ್ರೇಲಿಯಾ ಮಾದರಿಯ ತರಬೇತಿಯನ್ನು ರೂಢಿಗೆ ತಂದ ಮೊದಲ ಕೋಚ್ ಬಾಬಿ. ಬಿಸಿಸಿಐನಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದರು’ ಎಂದು ಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.