ADVERTISEMENT

ಟಿ20 ವಿಶ್ವಕಪ್‌ | ಇಂಗ್ಲೆಂಡ್ ತಂಡಕ್ಕೆ ಮರಳಿದ ವೇಗದ ಬೌಲರ್ ಜೋಫ್ರಾ ಆರ್ಚರ್‌

ಏಜೆನ್ಸೀಸ್
Published 30 ಏಪ್ರಿಲ್ 2024, 12:32 IST
Last Updated 30 ಏಪ್ರಿಲ್ 2024, 12:32 IST
<div class="paragraphs"><p>ಜೋಫ್ರಾ ಆರ್ಚರ್ (ಸಂಗ್ರಹ ಚಿತ್ರ)</p></div>

ಜೋಫ್ರಾ ಆರ್ಚರ್ (ಸಂಗ್ರಹ ಚಿತ್ರ)

   

ಲಂಡನ್: ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು ಟಿ20 ವಿಶ್ವಕಪ್‌ ಆಡುವ ಇಂಗ್ಲೆಂಡ್ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಜೋಸ್‌ ಬಟ್ಲರ್ ಮುನ್ನಡೆಸಲಿದ್ದಾರೆ.

29 ವರ್ಷದ ಆರ್ಚರ್‌ ಒಂದು ವರ್ಷದ ನಂತರ ಪುನರಾಗಮನ ಮಾಡುತ್ತಿದ್ದಾರೆ. ಬಲಮೊಣಕೈ ಗಾಯದಿಂದ ಅವರು ಚೇತರಿಸಿಕೊಂಡಿದ್ದಾರೆ. 2019ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಅವರು ಇಂಗ್ಲೆಂಡ್‌ ಪರ 15 ಟಿ20 ಪಂದ್ಯಗಳನ್ನುಆಡಿದ್ದಾರೆ.

ADVERTISEMENT

ಈ ವಿಶ್ವಕಪ್ ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದ್ದು, ಆರ್ಚರ್ ಅವರು ಬಾರ್ಬಾಡೋಸ್‌ನಲ್ಲಿ ಬೆಳೆದಿರುವುದು ಅವರಿಗೆ ಅನುಕೂಲಕರ ಅಂಶ. ತಂಡಕ್ಕೆ ಆಯ್ಕೆಯಾಗಿರುವ ವೇಗದ ಬೌಲರ್ ಕ್ರಿಸ್‌ ಜೋರ್ಡಾನ್ ಸಹ ಬಾರ್ಬಾಡೋಸ್ ಮೂಲದವರು.

ಇಂಗ್ಲೆಂಡ್ ತನ್ನ ಮೊದಲ ಪಂದ್ಯವನ್ನು ಜೂನ್ 4ರಂದು ಬಾರ್ಬಾಡೋಸ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ.

ಇದೇ ತಂಡವು, ಪಾಕಿಸ್ತಾನ ವಿರುದ್ಧ ಮೇ 22 ರಂದು ಹೆಡಿಂಗ್ಲೆಯಲ್ಲಿ ಆರಂಭವಾಗುವ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲೂ ಆಡಲಿದೆ. ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡ್‌ ಆಟಗಾರರು ಆ ವೇಳೆಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

15 ಆಟಗಾರರ ತಂಡ ಹೀಗಿದೆ:

ಜೋಸ್‌ ಬಟ್ಲರ್‌ (ನಾಯಕ, ವಿಕೆಟ್ ಕೀಪರ್‌), ಮೊಯಿನ್ ಅಲಿ, ಜೋಫ್ರಾ ಆರ್ಚರ್‌, ಜಾನಿ ಬೇಸ್ಟೊ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್‌, ಟಾಮ್ ಹಾರ್ಟ್ಲಿ, ವಿಲ್‌ ಜಾಕ್ಸ್‌, ಕ್ರಿಸ್‌ ಜೋರ್ಡಾನ್‌, ಲಿಯಾಮ್ ಲಿವಿಂಗ್‌ಸ್ಟೋನ್‌, ಅದಿಲ್ ರಶೀದ್‌, ಫಿಲ್ ಸಾಲ್ಟ್‌, ರೀಸ್ ಟೋಪ್ಲಿ, ಮಾರ್ಕ್‌ ವುಡ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.